ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರಗಳ ನಿರ್ಮಾಣ

ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರಗಳ ನಿರ್ಮಾಣ

ವಾಷಿಂಗ್ಟನ್‌, ಮಾ. 14, ನ್ಯೂಸ್ ಎಕ್ಸ್ ಪ್ರೆಸ್:  ಭಾರತದಲ್ಲಿ ಅಮೆರಿಕದ 6 ಅಣು ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸಲು 2  ರಾಷ್ಟ್ರಗಳು ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ಒಪ್ಪಂದ ಅಡಿಯಲ್ಲಿ ಪರಸ್ಪರ ಸಹಿ ಹಾಕಿದೆ.

ನಿನ್ನೆ ವಾಷಿಂಗ್ಟನ್ ನಲ್ಲಿ ನಡೆದ ಭಾರತೀಯ ಪ್ರತಿನಿಧಿಗಳೊಂದಿಗಿನ ಸಭೆ ಬಳಿಕ ನಡೆಸಿದ ಮಾತುಕತೆಯಲ್ಲಿ ಅಮೆರಿಕದ ಶಸಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತೆ ವಿಭಾಗದ ಅಧೀನ ಕಾರ್ಯದರ್ಶಿ ಆಯಂಡ್ರಿಯಾ ಥಾಮ್ಸನ್‌ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಈ ಒಪ್ಪಂದಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

“ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ವೃದ್ಧಿಗೆ ಉಭಯ ರಾಷ್ಟ್ರಗಳು ಬದ್ಧರಾಗಿದ್ದು, ಭಾರತದಲ್ಲಿ ಅಮೆರಿಕದ ಆರು ಅಣು ವಿದ್ಯುತ್‌ ಸ್ಥಾವರಗಳು ಸ್ಥಾಪನೆಯಾಗಲಿವೆ” ಎಂದು ಭಾರತ ಮತ್ತು ಅಮೆರಿಕ ಜಂಟಿ ಪ್ರಕಟನೆ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos