‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಟೈಟಲ್

‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಟೈಟಲ್

ಬೆಂಗಳೂರು: ರಜನಿಕಾಂತ್ ನಟನೆಯ ‘ಜೈಲರ್’ಸಿನಿಮಾ ಸೂಪರ್ ಹಿಟ್ ಆಯಿತು. 2023ರಲ್ಲಿ ರಿಲೀಸ್ ಆದ ನೆಲ್ಸನ್ ದಿಲೀಪ್​ಕುಮಾರ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈಗ ಈ ಚಿತ್ರದ ಸೀಕ್ವೆಲ್ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ‘ಜೈಲರ್ 2’ ಮಾಡೋಕೆ ನೆಲ್ಸನ್ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ರಜನಿಕಾಂತ್ ಅವರೇ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಎನ್ನುವ ಶೀರ್ಷಿಕೆ ಇಡಲಾಗಿದೆಯಂತೆ. ಈ ವರ್ಷ ಜೂನ್​ ತಿಂಗಳಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಲಿವೆ ಎಂದು ವರದಿ ಆಗಿದೆ. ಸದ್ಯ ಸ್ಕ್ರಿಪ್ಟ್​ನ ಡ್ರಾಫ್ಟ್ ರೆಡಿ ಆಗಿದ್ದು, ನೆಲ್ಸನ್ ಅವರ ಐಡಿಯಾ ಇಷ್ಟ ಆಗಿದೆ. ‘ಜೈಲರ್’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ವಿಲನ್​ನ ಕೊಲೆ ಮಾಡಿ, ತಪ್ಪು ಮಾಡಿದ ಮಗನನ್ನೇ ಕೊಲ್ಲುವ ದೃಶ್ಯ ಇತ್ತು. ಈ ಕಥೆಯನ್ನು ಪರ್ಫೆಕ್ಟ್ ಆಗಿ ಮುಂದುವರಿಸೋಕೆ ನೆಲ್ಸನ್​ಗೆ ಐಡಿಯಾ ಹೊಳೆದಿದೆ. ಈ ಕಥೆಗೆ ರಜನಿಕಾಂತ್ ಹಾಗೂ ಸನ್​ ಪಿಕ್ಚರ್ಸ್​ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಶಿವಣ್ಣ ಹಾಗೂ ಮೋಹನ್​ಲಾಲ್ ಕೂಡ ಸಿನಿಮಾದಲ್ಲಿ ಇರುತ್ತಾರಾ ಅನ್ನೋದು ಸದ್ಯದ ಪ್ರಶ್ನೆ.

 

ಫ್ರೆಶ್ ನ್ಯೂಸ್

Latest Posts

Featured Videos