ಹೊಂಡದಲ್ಲಿ ಬಿದ್ದು ಬಾಲಕಿ ಸಾವು

ಹೊಂಡದಲ್ಲಿ ಬಿದ್ದು ಬಾಲಕಿ ಸಾವು

ವಿಜಯಪುರ, ಅ.23 : ಆಟವಾಡಲು ಹೋಗಿದ್ದ 8 ವರ್ಷದ ಬಾಲಕಿಯೊಬ್ಬಳು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಜಲ್ಲೆಯ ಇಂಡಿ ತಾಲೂಕಿನಲ್ಲಿ ಜರುಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡುಗುಡಿ ವಸ್ತಿಯ ಪ್ರೇಮಾ ಮುತ್ತಗಿ ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಹಿನ್ನಲೆ ಕೃಷಿ ಹೊಂಡದ ಬಳಿ ಆಟವಾಡಲು ತೆರಳಿದ್ದ ಬಾಲಕಿ ರಕ್ಷಣಾ ಬೇಲಿ ಇಲ್ಲದ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದಾಗ ಬಾಲಕಿ ಮೃತ ಪಟ್ಟಿದ್ದಾಳೆ. ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿದೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos