ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ SRH vs MI

ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ SRH vs MI

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ಉಡೀಸ್‌ ಆಗಿದೆ.

ಐಪಿಎಲ್ 2024ರ ಈ ಟೂರ್ನಿಯಲ್ಲಿ ನಿನ್ನೆ ನಡೆದ ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಿತು. ಇಡೀ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ ಒಂದೇ ಒಂದು ಪಂದ್ಯದಲ್ಲಿ 500ಕ್ಕೂ ಮೀರಿದ ರನ್ಗಳನ್ನ ಮಾಡಿ ದಾಖಲೆ ಸೃಷ್ಟಿಸಲಾಯಿತು. ಅದು ಇಂದು ನಡೆದ ಐಪಿಎಲ್ 2024ರ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಎಂಟನೇ ಪಂದ್ಯ.

ಒಟ್ಟು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 277 ರನ್ಗಳನ್ನ ಹೊಡೆದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಮೊತ್ತದ ಗೆಲುವಿನ ಗುರಿಯನ್ನು ನೀಡಿತು. ಸನ್ ರೈಸರ್ಸ್ ಹೈದರಾಬಾದ್ ತಂಡ ಗಳಿಸಿದ 277 ರನ್ ಗಳು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ 263 ರನ್ ಗಳ ದಾಖಲೆಯನ್ನು ಹೊಡೆದು ಹಾಕಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಂದು ದಾಖಲೆಯಾದರೆ, ಮುಂಬೈ ಇಂಡಿಯನ್ಸ್ ತಂಡ ಪಂದ್ಯವನ್ನ ಗೆಲ್ಲುವುದರ ಜೊತೆಗೆ ಇನ್ನೊಂದು ದಾಖಲೆಯನ್ನು ಸೃಷ್ಟಿಸುವ ಹಾದಿಯಲ್ಲಿ ಸಾಗಿತ್ತು. ಪ್ರಾರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸರಾಗವಾಗಿ ಆಡಿಕೊಂಡು ಪಂದ್ಯವನ್ನ ಗೆದ್ದೇ ಗೆಲ್ಲುತ್ತೇವೆ ಎಂಬುವ ಮನಸ್ಥಿತಿಯನ್ನ ವೀಕ್ಷಕರಲ್ಲಿ ಮೂಡುವಂತೆ ಮಾಡಿತ್ತು, ಆದರೆ ಕೊನೆಯಲ್ಲಿ ಇದರ ವಿರುದ್ಧವಾಗಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವಲ್ಲಿ ವಿಫಲವಾಯಿತು.ಆದರೆ ಒಟ್ಟಾರೆಯಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಮುಂಬೈ ಇಂಡಿಯನ್ಸ್ ತಂಡದ ಈ ಪಂದ್ಯವು 523 ರನ್ಗಳ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಒಂದೇ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ಗಳನ್ನ ಗಳಿಸಿರುವ ಪಂದ್ಯ ಇದಾಗಿದ್ದು, ಐಪಿಎಲ್ 2024 ಈ ದಾಖಲೆಗೆ ಸಾಕ್ಷಿಯಾಗಿದ

ಫ್ರೆಶ್ ನ್ಯೂಸ್

Latest Posts

Featured Videos