ದಾಸವಾಳ ಹೂವಿನ ಹಲವಾರು ಆರೋಗ್ಯ ಲಕ್ಷಣಗಳು

ದಾಸವಾಳ ಹೂವಿನ ಹಲವಾರು ಆರೋಗ್ಯ ಲಕ್ಷಣಗಳು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಆದರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಹಲವಾರು ವಿವಿಧ ಖಾಸಗಿ ಉತ್ಪನ್ನಗಳಿಗೆ ನಾವು ಅವಲಂಬಿತರಾಗಿರುತ್ತೇವೆ, ಆದರೆ ಈ ಖಾಸಗಿ ಉತ್ಪನ್ನಗಳನ್ನು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಬದಲಾವಣೆಗಿಂತ ಆಗುವ ನಷ್ಟವೇ ಹೆಚ್ಚಾಗಿದೆ. ಆದ್ದರಿಂದ ನಮ್ಮ ನಮ್ಮನ್ನ ನಿಸರ್ಗದಲ್ಲಿ ಸಿಗುವಂತಹ ವಸ್ತುಗಳಲ್ಲಿ ನಮ್ಮ ಸೌಂದರ್ಯ ಹಾಗೂ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.

ದಾಸವಾಳ ಹೂವುಗಳು ಎಂದರೆ ಸಾಮಾನ್ಯವಾಗಿ ಎಲ್ಲರೂ ದೇವರಿಗೆ ಪ್ರಿಯವಾದ ಹೂವು ಎಂದು ಕೊಳ್ಳುತ್ತಾರೆ. ಇಲ್ಲವೇ ಅಲಂಕಾರಕ್ಕೆ ಹೇಳಿ ಮಾಡಿಸಿದ್ದು ಎಂದು ತಿಳಿಯುತ್ತಾರೆ. ಆದರೆ ಹೂವು ಹೇಗೆ ವಿವಿಧ ಬಣ್ಣಗಳಿಂದ ಸುಂದರವಾಗಿ ಇದೆಯೋ ಹಾಗೆಯೇ ಅದರ ಉಪಯೋಗಗಳು ಕೂಡ ಬಹಳಷ್ಟಿವೆ ಎಂದು ತಿಳಿದುಕೊಂಡವರು ಬಹುಶಃ ಅಲ್ಪಸ್ವಲ್ಪ ಮಂದಿಯಷ್ಟೇ.

ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ–ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ anti oxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ಈ ಹೂವಿನಲ್ಲಿ anti oxidants ಮತ್ತು ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

ಮೊಡವೆಗೆ ಮದ್ದು

ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.

ಕೂದಲುದುರುವಿಕೆಗೆ ಮದ್ದು

ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು.

ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಪಳಫಳ. ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲು ಸ್ಮೂತ್ ಆಗಿ ಹೊಳಪು ಬರುತ್ತದೆ.

ದೇಹಕ್ಕೆ ತಂಪು ತಂಪು

ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು. ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.

ಹೃದಯ ಸಮಸ್ಯೆಗೆ ಪರಿಹಾರ

ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ನೈಸರ್ಗಿಕ ಅಂಶ ಪರಿಣಾಮಕಾರಿ. ಈ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ದಾಸವಾಳ ಹೆಚ್ಚು ಪ್ರಯೋಜನ. ದಾಸವಾಳದ ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ,

ಹೃದಯ ಸ್ತಂಭನಕ್ಕೆ ಕಾರಣವಾಗುವ, ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ದಿನಾ ಒಂದರಿಂದ ಎರಡು ದಾಸವಾಳದ ಹೂವನ್ನು ತಿನ್ನುವುದು ಒಳ್ಳೆಯದು.

ಮಧುಮೇಹ, ಕಿಡ್ನಿ ಸಮಸ್ಯೆ

ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದಾಸವಾಳದ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ.

 

ಫ್ರೆಶ್ ನ್ಯೂಸ್

Latest Posts

Featured Videos