ಇಲ್ಲಿ ಒಪ್ಪತ್ತಿನ ಗಂಜಿಗೂ ಗತಿಯಿಲ್ಲಿ

ಇಲ್ಲಿ ಒಪ್ಪತ್ತಿನ ಗಂಜಿಗೂ ಗತಿಯಿಲ್ಲಿ

ಚಿಕ್ಕೋಡಿ, ಏ. 04: ಮಹಾಮಾರಿ ಕೊರೋನಾದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ, ಜನರ ನಿತ್ಯ ಜೀವನದ ಸಮತೋಲನವೇ ತಪ್ಪಿಹೋಗಿದೆ. ಇಲ್ಲಿನ ಅಲೆಮಾರಿ ಜನರ ಜೀವನ ಹಾಗೂ ಅನ್ನಕ್ಕಾಗಿ ಅವರು ಪಡುತ್ತಿರುವ ರೋದನೆ ಹೇಳತೀರದು. ತಮ್ಮ ಪುಟ್ಟ ಜೋಪಡಿಯಲ್ಲಿ ಅವರ ನಿತ್ಯ ಕಾಯಕಗಳಾದ ಪ್ಲಾಸ್ಟಿಕ್‌ ಕೊಡ, ಬಕೀಟುಗಳ ರಿಪೇರಿ, ಗೊಂಬೆಗಳ ಮಾರಾಟ, ಚಿಂದಿ ಆರಿಸುವುದು,  ಮಹಿಳೆಯರು, ಮಕ್ಕಳು ವೃದ್ಧರು ಸೇರಿದಂತೆ ಮನೆ ಮನೆಗಳಿಗೆ ಹೋಗಿ ಭೀಕ್ಷೆ ಬೇಡಿ  ಬಹುರೂಪಿ ವೇಷ ಧರಿಸಿ ಜನರಿಗೆ ಮನರಂಜನೆ ನೀಡುವುದರೊಂದಿಗೆ ಹಾಸಿಗೆ ಇದ್ದಷ್ಟು ಕಾಲು ಚಾಚುತ್ತ ಜೀವನ ಸಾಗಿಸುತಿದ್ಧರು. ಆದರೆ ಈ ಮಹಾಮಾರಿ ಕೊರೋನ ಲಾಕ್ ಡೌನ್ ನಿಂದ 25ರಿಂದ 30ಕುಟುಂಬಗಳು ಇಂದು ಬೀದಿಗೆ ಬಂದಿವೆ. ನಿತ್ಯದ ಅವರ ಕಾಯಕ ನಿಂತು ಹೋಗಿದೆ. ಪಡಿತರ ಅಂಗಡಿಗೆ ಹೋದರು ಸರಿಯಾಗಿ ಅಕ್ಕಿ ಸಿಗುತ್ತಿಲ್ಲ. ಹಸಿವೆಯಿಂದ ಬಳಲುತ್ತಿರುವ ಮಕ್ಕಳು ಕಾಲಿ ತಟ್ಟೆಹಿಡಿದು ಅಳುವ ಪರಿಸ್ಥಿತಿ ಬಂದೀದೆ.

ಹೌದು, ಈ ಘಟನೆ ನಡೆದಿದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ‌ ಮುಗಳಖೋಡ ಪಟ್ಟಣದ ಸಿದ್ದರಾಯನ ಮಡ್ಡಿಯಲ್ಲಿ ಸುಮಾರು 25 ರಿಂದ 30 ಕುಟುಂಬಗಳಲ್ಲಿ ಸುಮಾರು ನೂರಾಕ್ಕೂ ಹೆಚ್ಚು ಜನ ಅಲೆಮಾರಿ ಜನರು ತಮ್ಮ ಪುಟ್ಟ ಜೋಡಿಗಳಲ್ಲಿ  ವಾಸವಾಗಿದ್ದಾರೆ. ಆದರೆ ಕಳೆದ 10 ದಿನಗಳಿಂದ ಈ ಜನರು ಕಣ್ಣಿರಿನಲ್ಲಿ ಕೈತೋಳೆಯುತಿದ್ದಾರೆ. ಒಪ್ಪತ್ತಿನ ಗಂಜಿಗಾಗಿ ವೃದ್ಧರು, ಮಹಿಳೆಯರು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಗೋಗರಿಯುತಿದ್ದಾರೆ.  ಬೆಳಗಾದರೆ ಸಾಕು ತಾವು ಮಾಡಬೇಕಿದ್ದ ಕಾಯಕ ಕೊರೋನ ಕಂಟಕದಿಂದ ನಿಂತು ಹೋಗಿದೆ. ಒಂದೆಡೆ ಕೊರೋನಾ ಭೀತಿ, ಮತ್ತೊಂದೆಡೆ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಚಿಂತೆ. ಹೀಗೆ ಈ ಕುಟುಂಬಗಳು ಹಗಲು, ರಾತ್ರಿಯಿಡೀ ಆತಂಕ ಮತ್ತು ಚಿಂತೆಯಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಗಳಖೋಡ ಪಟ್ಣದ ಸಿದ್ದರಾಯನ ಮಡ್ಡಿ ಹೊರವಲಯದ ವಾಸವಾಗಿದ್ದು ಮಕ್ಕಳು, ಮಹಿಳೆಯರು , ವೃದ್ಧರು ಸೇರಿ ನೂರಾರು ಜನರಿರುವ 30ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ತಾತ್ಕಾಲಿಕ ಜೋಪುಡಿಯಲ್ಲಿಕಾಲ ಕಳೆಯುತ್ತಿವೆ.

ಇದೀಗ ಕೊರೋನಾ ರೋಗ ಇವರ ಕಾಯಕಕ್ಕೇ ಬೀಗ ಜಡಿದಿದೆ. ಬದುಕು ಪೂರ್ಣ ಲಾಕ್‌ಡೌನ್‌ ಆಗುತ್ತಿದೆ. ಯಾವ ಹಳ್ಳಿಗೂ ಹೋಗುವಂತಿಲ್ಲ. ಪಟ್ಟಣದಲ್ಲಿ ತಿರುಗುವತ್ತಿಲ್ಲ.

ಸಾರ್ವಜನಿಕರು ಇವರನ್ನು ಊರೊಳಗೇ ಬಿಟ್ಟುಕೊಳ್ಳುತ್ತಿಲ್ಲ. ಕೈಗೆ ಹಣ ಸೇರುವುದೂ ಸ್ಥಗಿತವಾಗಿದೆ. ಕುಟುಂಬದ ಯಜಮಾನನಿಗೆ ತಮ್ಮ ಮನೆ ಮಂದಿ ಮಕ್ಕಳ ಹೊಟ್ಟೆಯನ್ನು ಹೇಗೆ ತುಂಬಿಸಬೇಕೆಂಬುದೇ ಚಿಂತೆಯಾಗಿದೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಈ ಅಲೆಮಾರಿ ಕುಟುಂಬಗಳ ಬಗ್ಗೆ ಕಾಳಜಿವಹಿಸದೇ ಇರುವುದು ಇವರ ದುರ್ದೈವದ ಸಂಗತಿ.  ಇವರ ಈ ನರಕಯಾತನೆಗೆ ಸಹಹೃದಯ ದಾನಿಗಳು ಸಹಾಯ ಸಹಕಾರ ನೀಡುತ್ತಾರೆಂದು ಕಳೆದ ಹತ್ತು ದಿನಗಳಿಂದ ಅನ್ನಕಾಗಿ ಕಾಯುತ್ತಿದ್ದಾರೆ. ಇನ್ನಾದರೂ ಇವರ ಅನ್ನದ ಹಸಿವು ಇಂಗುತ್ತೋ? ಇವರ ಕಣ್ಣೀರಿನ ಕಥೆ ಮುಗಿತ್ತಾ ಅಂತಾ ಕಾಯ್ದು ನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos