ಪುದೀನದಲ್ಲಡಗಿದೆ ಆರೋಗ್ಯ

ಪುದೀನದಲ್ಲಡಗಿದೆ ಆರೋಗ್ಯ

ಬೆಂಗಳೂರು, ಸೆ. 5: ಪುದೀನಾ ಎಲೆಗಳನ್ನು ನಿಮ್ಮ ದಿನನಿತ್ಯದ ಯಾವುದಾದರೊಂದು ಆಹಾರದಲ್ಲಿ ಬಳಸುತ್ತಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಕಾಣಬಹುದು.

ದೇಹವ ತಂಪು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಪುದೀನಾ ರಸವನ್ನು ಕುಡಿಯುವುದು ಉತ್ತಮ. ಇದರಿಂದ ಆಯಾಸ ನಿವಾರಣೆಯಾಗುವುದಲ್ಲದೆ, ದೇಹದದ ಉಷ್ಣತೆಯನ್ನು ನಿಯಂತ್ರಿಸುತ್ತದೆ.

ಕಾಲರಾ ರೋಗ

ಕಾಲರಾ ರೋಗ ಕಾಣಿಸಿಕೊಂಡಿದ್ದರೆ ಪುದೀನಾ, ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕುಡಿಯುವುದು ಪ್ರಯೋಜನಕಾರಿ.

ಚರ್ಮದ ಕಾಂತಿ

ಪುದೀನಾವನ್ನು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಪುದೀನಾ ಎಲೆಗಳ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತಾಜಾತನ ಮತ್ತು ತೇವಾಂಶ ಸಿಗುತ್ತದೆ.

ಸುಕ್ಕುಗಟ್ಟುವಿಕೆ

ಸುಕ್ಕುಗಟ್ಟುವಿಕೆಯನ್ನು ತಡೆಯುವಲ್ಲಿಯು ಸಹ ಪುದೀನಾ ಪ್ರಯೋಜನಕಾರಿ. ಪುದೀನಾ ಎಲೆಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವ ಮೂಲಕ ಚರ್ಮದ ಯೌವ್ವನವನ್ನು ಕಾಪಾಡಿಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos