ದಿನಕೊಂದು ನೇರಳೆಹಣ್ಣು ತಿನ್ನಿ

ದಿನಕೊಂದು ನೇರಳೆಹಣ್ಣು ತಿನ್ನಿ

ಬೆಂಗಳೂರು, ಜೂನ್. 13: ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು..

ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ.

ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರಕ್ಕೆ ಪಂಪ್ ಮಾಡುತ್ತದೆ. ರಕ್ತವು ಶುದ್ಧಿಯಾಗುತ್ತದೆ.

ರಕ್ತ ಹೀನತೆ ಸಮಸ್ಯೆ ಎದುರಿಸುವವರು ನೇರಳೆ ಹಣ್ಣನ್ನು ತಿನ್ನುವುದರಿಂದ ಬಳಲಿಕೆ ತೊಲಗುತ್ತದೆ. ಶಕ್ತಿ, ಚೈತನ್ಯ ಬರುತ್ತದೆ. ದೇಹಕ್ಕೆ ಸಾಕಷ್ಟು ಕಬ್ಬಿಣಾಂಶವು ಲಭ್ಯವಾಗುತ್ತದೆ.

100 ಗ್ರಾಂಗಳ ನೇರಳೆ ಹಣ್ಣಿನಲ್ಲಿ ಶೇಕಡ 55ರಷ್ಟು ಪೊಟ್ಯಾಶಿಯಂ ಇರುತ್ತದೆ. ಹೃದಯ, ಮಧುಮೇಹ, ರಕ್ತದೊತ್ತಡ ಇರುವವರು ಒಂದೇ ಒಂದು ಹಣ್ಣು ತಿಂದರೂ ಸರಿಹೋಗುತ್ತದೆ.

ಜೀರ್ಣಶಕ್ತಿ ಸರಿಯಾಗಿಲ್ಲದಿರುವಾಗ ಒಂದು ಕಪ್ ಮೊಸರಿಗೆ 4 ಚಮಚ ನೇರಳೆ ಹಣ್ಣಿನ ರಸ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.

ಒಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ, ಮಾತನಾಡಲು ಆಗದೆ ಹಲ್ಲುಗಳು ನೋಯುತ್ತಿದ್ದರೆ, ಬಾಯಿ ದುರ್ವಾಸನೆ ಸಮಸ್ಯೆಗಳಿಗೆ ನೇರಳೆಹಣ್ಣು ದಿವ್ಯೌಷಧ. ಇದನ್ನು ಅಗಿದಾಗ ಹುಳಿ, ಸಿಹಿ ಒಗರು ಸುವಾಸಿತ ಜ್ಯೂಸ್ ಬಾಯಿಯ ದುರ್ನಾತವನ್ನು ದೂರಮಾಡುತ್ತದೆ. ಬಾಯಿಯ ಆರೋಗ್ಯವನ್ನು ಸಂರಕ್ಷಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos