ಸ್ತನ ಕ್ಯಾನ್ಸರ್ ಗೆ ಮಾವಿನ ಹಣ್ಣು ಮದ್ದು     

ಸ್ತನ ಕ್ಯಾನ್ಸರ್ ಗೆ ಮಾವಿನ ಹಣ್ಣು ಮದ್ದು     

ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ಬೇಸಿಗೆ ಬರುತ್ತಿದ್ದಂತೆ ಹಣ್ಣುಗಳ ರಾಜ ಮಾವು ಕೂಡ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಮಾವಿನ ಹಣ್ಣನ್ನು ಮತ್ತು ಮ್ಯಾಂಗೊ ಜ್ಯೂಸ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಬೆಳಿಗಿನ ಜಾವ 1 ಗ್ಲಾಸ್ ಮಾವಿನ ಜ್ಯೂಸ್ ಕುಡಿದರೆ ಇಡೀ ದಿನ ಚಟುವಟಿಕೆಯಿಂದರಲು ಈ ಹಣ್ಣಿನಲ್ಲಿರುವ ಅಂಶಗಳು ನೆರವಾಗುತ್ತವೆ.

ದಿನಂಪ್ರತಿ ಮಾವಿನ ಹಣ್ಣನ್ನು ಸೇವಿಸುವುದರಿಂದ ಆರೋಗ್ಯವನ್ನು ಜತೆಗೆ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದರಲ್ಲಿರುವ ವಿಟಮಿನ್ ಕೆ ಪೋಷಕಾಂಶ ರಕ್ತಸ್ರಾವ ಸಮಸ್ಯೆಯನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ. ಇಷ್ಟೇ ಅಲ್ಲದೆ ಮಾವಿನ ಹಣ್ಣಿನಲ್ಲಿ ಪೊಟ್ಯಾಷಿಯಂ ಮತ್ತು ಮ್ಯಾಂಗಿಫೆರಿನ್ ಎಂಬ ಆಂಟಿ ಅಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರದಲ್ಲಿಡುತ್ತದೆ.

ಮಾವಿನ ಹಣ್ಣನ್ನು ಸೇವಿಸುವುದರಿಂದ ಕರುಳು ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಯಬಹುದು ಎಂದು ಸಾಬೀತಾಗಿದೆ. ಅಧಿಕ ಆಂಟಿ ಆಕ್ಸಿಡೆಂಟ್ ಸಾಮರ್ಥ್ಯವಿರುವ ಹಣ್ಣುಗಳಿಗೆ ಹೋಲಿಸಿದರೆ ಮಾವಿನ ಹಣ್ಣಿನಲ್ಲಿ ಅತೀ ಕಡಿಮೆ ಪ್ರಮಾಣ ಆಂಟಿ ಅಕ್ಸಿಡೆಂಟ್ ಅಂಶಗಳಿವೆ. ನೇರಳೆ ಹಣ್ಣು, ದಾಳಿಂಬೆಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ಗಳಿಗೆ ಹೋಲಿಸಿದರೆ ಮಾವಿನಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆ. ಆದರೆ ಮಾವಿನಲ್ಲಿರುವ ಆಂಟಿ ಅಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಕೋಶಗಳನ್ನು ತಡೆಯುವಲ್ಲಿ ನೆರವಾಗುತ್ತದೆ.

ಮಾವಿನ ಹಣ್ಣಿನಲ್ಲಿರುವ ಪಾಲಿಫಿನಾಲ್ ಗಳನ್ನು ಕರುಳು, ಸ್ತನ, ಶ್ವಾಸಕೋಶ, ರಕ್ತ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ಪ್ರಯೋಗಿಸಿ ನೋಡಲಾಗಿದೆ. ಫಾಲಿಫಿನಾಲ್ ಗಳು ಸಸ್ಯಜನ್ಯ ಆಹಾರದಲ್ಲಿ ಕಂಡು ಬರುವಂತಹ ನೈಸರ್ಗಿಕ ಅಂಶವಾಗಿದೆ. ಇದು ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾವಿನ ಹಣ್ಣುಗಳನ್ನು ದಿನಂಪ್ರತಿ ತಿಂದರೆ ಶ್ವಾಸಕೋಶ, ರಕ್ತ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಸ್ತನ ಮತ್ತು ಕರುಳಿನ ಕ್ಯಾನ್ಸರ್ ವಿರೋಧಿಯಾಗಿ ಇದು ಕೆಲಸ ಮಾಡುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos