ಎದೆ ಹಾಲು ಹೆಚ್ಚಿಸವ ಮೆಂತ್ಯ ಸೊಪ್ಪು

ಎದೆ ಹಾಲು ಹೆಚ್ಚಿಸವ ಮೆಂತ್ಯ ಸೊಪ್ಪು

ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ.

ಮಧುಮೇಹ: ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು.

ಕೊಲೆಸ್ಟ್ರಾಲ್: ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಎದೆ ಹಾಲು ಹೆಚ್ಚಿಸಲು: ಕೆಲವು ತಾಯಂದಿರಿಗೆ ಎದೆ ಹಾಲು ಉತ್ಪತ್ತಿಯಾಗದೇ ಮಗುವಿಗೆ ಸಾಕಷ್ಟು ಹಾಲುಣಿಸಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂತಹ ಮೆಂತ್ಯ ಸೊಪ್ಪನ್ನು ತರಕಾರಿ ರೂಪದಲ್ಲಿ ಅಥವಾ ಹರ್ಬಲ್ ಟೀ ರೂಪದಲ್ಲಿ ಸೇವಿಸುವುದರಿಂದ ಎದೆ ಹಾಲು ಹೆಚ್ಚುವುದು.

ಪುರುಷರ ಲೈಂಗಿಕತೆ: ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos