ಹಾಗಲಕಾಯಿ ಸೇವಿಸಿ, ʼಸಕ್ಕರೆ ಖಾಯಿಲೆʼಯಿಂದ ದೂರವಿರಿ

ಹಾಗಲಕಾಯಿ ಸೇವಿಸಿ, ʼಸಕ್ಕರೆ ಖಾಯಿಲೆʼಯಿಂದ ದೂರವಿರಿ

ಬೆಂಗಳೂರು, ಮೇ. 22, ನ್ಯೂಸ್ ಎಕ್ಸ್ ಪ್ರೆಸ್: ಬಹಳ ಜನರಿಗೆ ಹಾಗಲಕಾಯಿ ಅಂದರೆ ಇಷ್ಟ ವಾಗುವುದಿಲ್ಲ. ಹಾಗಲಕಾಯಿ ಎಂದಾಕ್ಷಣ ಮುಖ ಕಿವಿಚಿಕೊಳ್ಳುತ್ತಾರೆ. ಆದರೆ ಹಾಗಲಕಾಯಿ ಬಾಯಿಗೆ ಕಹಿಯಾದರೂ ಉದರಕ್ಕೆ ಸಿಹಿ. ಹಲವು ಚಿಕಿತ್ಸೆಗಳಲ್ಲಿ ಹಾಗಲಕಾಯಿ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಧುಮೇಹದಿಂದ ಬಳಲುವವರು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಹಾಗಲಕಾಯಿ ರಸ ಕುಡಿದರೆ ಸಕ್ಕರೆ ಪ್ರಮಾಣ ಹತೋಟಿಯಲ್ಲಿರುತ್ತದೆ.

ಜ್ವರ, ಮಲಬದ್ಧತೆಗೆ ರಾಮಬಾಣ..!

ಜ್ವರದ ತೀವ್ರತೆಯನ್ನು ಕಡಿಮೆ ಮಾಡಲು ಹಾಗಲಕಾಯಿ ರಸ ಸೇವನೆ ಒಳ್ಳೆಯದು. ಹಾಗಲಕಾಯಿಯಲ್ಲಿ ವಿಟಮಿನ್ ಎ ಯಥೇಚ್ಚವಾಗಿ ಇರುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಮಲಬದ್ದತೆಯಿಂದ ಬಳಲುತ್ತಿರುವವರು ಹಾಗಲಕಾಯಿ ಚೂರುಗಳಿಂದ ತಯಾರಿಸಿದ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos