ಬೇಸಿಗೆಯಲ್ಲಿ ಪುದೀನಾ ಪಾನೀಯ.!

ಬೇಸಿಗೆಯಲ್ಲಿ ಪುದೀನಾ ಪಾನೀಯ.!

ಬೆಂಗಳೂರು, ಮೇ. 21, ನ್ಯೂಸ್ ಎಕ್ಸ್ ಪ್ರೆಸ್: ಪುದೀನಾದಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದ್ದು, ಅಡುಗೆಯ ರುಚಿ ಹೆಚ್ಚಿಸುವುದಲ್ಲದೇ ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಇನ್ಫೆಕ್ಷನ್ ನಿಂದ ರಕ್ಷಿಸುತ್ತದೆ. ಹೆಚ್ಚು ಪ್ರಯೋಜನಗಳನ್ನು ಹೊಂದಿರುವ ಪುದೀನಾ, ಬೇಸಿಗೆಯಲ್ಲಿ ಬೆಸ್ಟ್. ಪುದೀನಾದಿಂದ ತಯಾರಿಸೋ ಪಾನೀಯಗಳು ನಿಮ್ಮನ್ನು ಬೇಸಿಗೆಯಲ್ಲಿ ಫ್ರೆಶ್ ಆಗಿರುಸುವಲ್ಲಿ ಸಹಾಯ ಮಾಡುತ್ತವೆ.

* ತೂಕ ನಷ್ಟಕ್ಕೆ ನಿಂಬೆ ಮತ್ತು ಪುದೀನಾ ಪಾನೀಯ ಉತ್ತಮ. ಪುದೀನಾದಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿದ್ದು, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ನಿರ್ಜಲೀಕರಣವನ್ನು ನಿವಾರಿಸುತ್ತದೆ.

* ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆ ಮಾಡಲು ಎಳನೀರು, ಕೂಲ್ ಡ್ರಿಂಕ್ಸ್, ಜ್ಯೂಸ್, ತಂಪು ಪಾನೀಯಾಗಳ ಮೊರೆ ಹೋಗುತ್ತೇವೆ. ಆರೋಗ್ಯಕರ ಎಳನೀರು, ನಿಂಬೆ ರಸ ಹಾಗೂ ಪುದೀನಾ ಪಾನೀಯ ಕೂಡ ಬೇಸಿಗೆಯಲ್ಲಿ ನಿಮ್ಮನ್ನು ಕೂಲ್ ಆಗಿರುಸುತ್ತದೆ. ಬೇಸಿಗೆಯ ಉಷ್ಣತೆಯನ್ನು ನಿವಾರಿಸಲು ಪುದೀನಾ ಅತ್ಯುತ್ತಮ ಪಾನೀಯ. ಎಳನೀರು, ನಿಂಬೆ ರಸ ಹಾಗೂ ಪುದೀನಾ ಮಿಶ್ರಿತ ಈ ಡ್ರಿಂಕ್ಸ್ ಪ್ರತಿ ನಿತ್ಯ ಸೇವಿಸಬಹುದು.

*ಪುದೀನಾ ಚಹಾದಲ್ಲಿ ನೋವು ನಿವಾರಕ ಗುಣಗಳಿವೆ. ಇದು ಸ್ನಾಯುಗಳಲ್ಲಿರುವ ನೋವನ್ನು ನಿವಾರಿಸುತ್ತದೆ. ಈ ಚಹಾದಲ್ಲಿ ಮೆಂಥಾಲ್ ಇರುವುದರಿಂದ  ಜೀರ್ಣಕ್ರಿಯೆವನ್ನು ಸುಲಭಗೊಳಿಸುತ್ತದೆ. ಬೇಸಿಗೆಯಲ್ಲಿ ಕಾಫಿ, ಚಹಾ ಕುಡಿಯಲು ಆಗಲ್ಲ. ಆಗ ಪುದೀನಾ ಚಹಾವನ್ನು ಟ್ರೈ ಮಾಡಬಹುದು. ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಮಿಂಟ್ ಟೀ ತಯಾರಿಸಬಹುದು.

* ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟ ಪಡುತ್ತಾರೆ. ನಾಲಿಗೆಗೆ ರುಚಿ ಎನಿಸುವ ಪುದೀನಾ ಲಸ್ಸಿ ಒಮ್ಮೆ ಟ್ರೈ ಮಾಡಬಹುದು. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

* ಪೌಷ್ಟಿಕಾಂಶ ಹೆಚ್ಚಿಸುವಲ್ಲಿ ಈ ಪಾನೀಯ ಸಹಾಯ ಮಾಡುತ್ತದೆ. ಪುದೀನ್, ಕಿವಿ ಹಣ್ಣು , ಹಾಗೂ ನಿಂಬೆಹಣ್ಣು ಮಿಶ್ರಿತ ಈ ಪಾನೀಯವನ್ನು ಸಿದ್ಧಪಡಿಸಿ, ಪ್ರತಿ ದಿನ ಸೇವಿಸಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos