ಕ್ಷಯ ರೋಗ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ

ಕ್ಷಯ ರೋಗ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ

ಜಡಿಗೇನಹಳ್ಳಿ, ಜು. 18: ಕ್ಷಯ ರೋಗ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೊಸಕೋಟೆ ತಾಲ್ಲುಕು ಕಸಬಾ ಹೋಬಳಿಯಲ್ಲಿ ಫಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ರೊಕ್ಸಿ ಪ್ಲೋರ್ ಮಿಲ್ಸ್ ಪ್ರವೈಟ್ ಲಿಮಿಟೆಡ್ ಕಂಪನಿ ಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಮುಗಬಾಳ ಆರೋಗ್ಯ ಇಲಖೆಯ ವೈದ್ಯಾಧಕಾರಿ ಡಾ,ವೀಣರವರು ಕ್ಷಯ ರೋಗ ಪತ್ತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಂಪನಿಯ 120 ಸಿಬ್ಬಂದಿಗಳಿಗೆ ಕ್ಷಯಾರೋಗ ಬಗ್ಗೆತಪಾಸಣೆಯನ್ನು ಮಾಡಿ, ಕ್ಷಯಾ ರೋಗದಮಾಹಿತಿಯಿರುವ ಕರಪತ್ರವನ್ನು ನೀಡಿ ತಿಳುವಳಿಕೆ ನೀಡಿದರು. ಕ್ಷಯ ರೋಗ ಪತ್ತೆ ಮತ್ತು ಚಿಕಿಸ್ಥೆ ಆಂದೋಲನ ನಡೆಯುತಿದ್ದು, ಕ್ಷಯ ರೋಗ ಮೈಕೋ  ಬ್ಯಾಕ್ಟೀರಿಯಾದಿಂದ ಹರಡುವ ಒಂದು ಸಾಂಕ್ರಾಮಿಕ ರೋಗ, ಕ್ಷಯ ರೋಗದಿಂದ ಬಳಲುವ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಚಿಕಿತ್ಸೆ ಪಡೆಯದ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 10 ಅಥವಾ ಹೆಚ್ಚು ಜನರಿಗೆ ಸೋಂಕು ಉಂಟು ಮಾಡಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿ ಶಿವಗಂಗಮ್ಮ, ಕ್ಷಯರೋಗ ಚಿಕಿತ್ಸ ಮೇಲ್ವಿಚಾರಕರು ಸುದೀಪ್, ತಾಲ್ಲೂಕು ಆರೋಗ್ಯ ಕಚೇರಿ ಪರಮೇಶ್ವರ, ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos