ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಚಂಚಲ ಮನಸ್ಸನ್ನು ಹತೋಯಲ್ಲಿಡಿ

ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಚಂಚಲ ಮನಸ್ಸನ್ನು ಹತೋಯಲ್ಲಿಡಿ

ಕೆ.ಆರ್ಪುರ, ಆ. 6: ವಿದ್ಯಾರ್ಥಿಗಳು ನಿರಂತರವಾದ ಸಾಧನೆಯೊಂದಿಗೆ ಅಗಾಧವಾದುದನ್ನು ಸಾಧಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.

ಕೆ.ಆರ್.ಪುರ ಸಮೀಪದ ಹೆಣ್ಣೂರು ಬಾಗಲೂರು ರಸ್ತೆಯ ವಿಜಯ ವಿಠಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ನೂತನ ತರಗತಿಯ ಪ್ರವೇಶ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಿಬೇಕೆಂಬ ಹಂಬಲ ಇಟ್ಟುಕೊಂಡು ಗುರಿ ಸಾಧಿಸಿ. ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯ ಅಧಾರಿತ ಶಿಕ್ಷಣ ಪಡೆದರೆ ಉದ್ಯೋಗ ಪಡೆಯಲು ಸುಗಮವಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಚಂಚಲ ಮನಸ್ಸನ್ನು ಹತೋಟಿಗೆ ತಂದುಕೊಂಡು ಓದಿನ ಕಡೆಗೆ ಗಮನ ಹರಿಸಬೇಕು. ಪ್ರಪಂಚ ವಿಶಾಲವಾದಷ್ಟು ಸ್ಪರ್ಧೆಗಳು ಹೆಚ್ಚಾಗಿದೆ ಎಂದರು.

ವಾಸುದೈವ ಕುಟುಂಬಕಂ ಎನ್ನುವಂತೆ ಜೀವನದಲ್ಲಿ ಸಾಧನೆ ಮಾಡಿದಾಗ ನಮ್ಮ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಕೀರ್ತಿ ಬರುತ್ತದೆ. ಕೆಲವೊಮ್ಮೆ ಏನಾದರೂ ಸಾಧಿಸಿಬೇಕೆಂದಾಗ ಅನೇಕ ತೊಂದರೆ ಬರಬಹುದು ಆದರೆ, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸ ಚಲ ಸಾಧಿಸಿ ಎಂದು ಹೇಳಿದರು.

ಜೆನ್ ಬಿಲ್ಡಿಂಗ್ ಸಲೂಷನ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ಬಿ.ಕೆ.ರಮೇಶ್, ಬೆಂಗಳೂರು ನಗರದಲ್ಲಿ ಉತ್ತಮ ಶಿಕ್ಷಣ ನೀಡುವಂತ ಸಂಸ್ಥೆಗಳಲ್ಲಿ ವಿಜಯ ವಿಠಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೂಡ ಒಂದು. ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಶಿಸ್ತುಬದ್ಧ ಓದಿನ ಕಡೆ ಹೆಚ್ಚು ಗಮನ ಹರಿಸಿ ಎಂದರು.

ಈ ಸಂಧರ್ಭದಲ್ಲಿ ಶ್ರೀ ವಿಜಯ ವಿಠಲ ಚಾರಿಟೇಬಲ್ ಮತ್ತು ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ ಟಿ, ಕಾರ್ಯದರ್ಶಿ ಕೆ.ತ್ಯಾಗರಾಜ್, ಡಾ.ಶಿವಪ್ರಕಾಶ್ ಟಿ, ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ಇದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos