ಊತ್ತಮ ಆರೋಗ್ಯಕ್ಕಾಗಿ ಗ್ರೀನ್ ಟೀ ಕುಡಿಯಿರಿ

ಊತ್ತಮ ಆರೋಗ್ಯಕ್ಕಾಗಿ ಗ್ರೀನ್ ಟೀ ಕುಡಿಯಿರಿ

ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು  ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ.

* ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ  ಹಚ್ಚಿರಿ.  ಈ ರೀತಿ ಮಾಡುವುದರಿಂದ ಈ ಸಮಸ್ಯೆಗೆ ಬೈ ಹೇಳ ಬಹುದಾಗಿದೆ.ಟೀ ದ್ರಾವಣದಲ್ಲಿ ಮೃದುವಾದ  ಬಟ್ಟೆಯಿಂದ ಅದ್ದಿ ಇಡಿ ಮುಖಕ್ಕೆ ನಿಧಾನವಾಗಿ ಹಚ್ಚಿರಿ. 

*ಎರಡು ಟೀ ಸ್ಪೂನ್ ಟೀ ಪುಡಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅದನ್ನು ಮುಖಕ್ಕೆ  ಲೇಪಿಸಿ ಒಂದು ಗಂಟೆ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.

*ಚರ್ಮ ತಾಜಾವಾಗಿರಲು ಮೂರು ಚಮಚೆ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಯ ಭಾಗ , ಸ್ವಲ್ಪ  ನಿಂಬೆ ರಸ ಮತ್ತು ಜೇನು ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ  ಬಳಿಕ ಸ್ವಚ್ಚಗೊಳಿಸಿ.

*ಜೇನು ಮತ್ತು ಟೀ ಪುಡಿಯ ಮಿಶ್ರಣದಲ್ಲಿ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಸತ್ತ  ಮೃತ ಕಣಗಳು ದೂರವಾಗುತ್ತದೆ.

* ತಲೆ ಸ್ನಾನ ಆದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ  ಕೇಶದ ಆರೋಗ್ಯ ಸುಸ್ಥಿರವಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos