ಮದ್ಯಪಾನಿಗಳ ರಕ್ತ ಹೀರುತ್ತಿರುವ ಸರ್ಕಾರ

ಮದ್ಯಪಾನಿಗಳ ರಕ್ತ ಹೀರುತ್ತಿರುವ ಸರ್ಕಾರ

 ತುರುವೇಕೆರೆ,ಮೇ,11: ಮದ್ಯಪಾನಿಗಳ  ಸರ್ಕಾರ ರಕ್ತ ಹೀರುತ್ತಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಶೇ. ೬ ರಷ್ಟು  ಮದ್ಯದ ದರವನ್ನು ಹೆಚ್ಚಿಸಿ ಮದ್ಯಪಾನಿಗಳ ರಕ್ತ ಹೀರುತ್ತಿದೆ.  ಈಗಾಗಲೇ ಕುಡುಕರ ಜೀವನ ಹಾಳಾಗುತ್ತಿದೆ. ಈಗ ಅದರ ಜೊತೆಗೆ ಮದ್ಯದ ಬೆಲೆಯನ್ನು ವಿಪರೀತವಾಗಿ ಹೆಚ್ಚಳ ಮಾಡಿದ್ದು ಅವರ ರಕ್ತಹೀರುವ ವ್ಯವಸ್ಥೆ ಆಗಿದೆ. ಬಹುತೇಕ ಕೂಲಿ ಕಾರ್ಮಿಕರೇ ಹೆಚ್ಚಾಗಿ ಮದ್ಯ ಸೇವನೆ ಮಾಡುತ್ತಿದ್ದು ಕೊರೋನೊದಿಂದ ಅವರು ಉದ್ಯೋಗವನ್ನೇ ಕಳೆದುಕೊಂಡಿದ್ದು,  ಅದರಲ್ಲಿ ರಾಜ್ಯ ಸರ್ಕಾರ ಅವರೇ ಮೇಲೆ ಮದ್ಯವನ್ನು ಹೆಚ್ಚಿಸಿ ಬರೆಎಳದಂತೆ ಮಾಡಿದೆ ಕೂಡಲೇ ಮುಖ್ಯಮಂತ್ರಿಗಳು ಹೆಚ್ಚಿಸಿರುವ ಮದ್ಯದ ತೆರಿಗೆ ದರವನ್ನು ಕೈಬಿಡಬೇಕೆಂದು ಇದನ್ನೇ ನೆಪಮಾಡಿಕೊಂಡು ಮದ್ಯದ ಅಂಗಡಿಯವರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದರು.

ಸಹಾಯಧನ  ಸ್ವಾಗಾತರ್ಹ‍

ಸರ್ಕಾರ ೧೬೧೦ ವಿಶೇಷ ಪ್ಯಾಕೇಜ್‌ನಲ್ಲಿ ನೇಕಾರರು, ಮಡಿವಾಳರು, ಕ್ಷೌರಿಕರು, ಆಟೋ-ಟ್ಯಾಕ್ಸಿ ಚಾಲಕರಿಗೆ ಸಹಾಯಧನ ನೀಡುತ್ತಿರುವುದು ಸ್ವಾಗಾತರ್ಹ. ಆದರೆ  ಲಾಕ್‌ಡೌನ್‌ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸ್ಲಂ ಜನರು, ಬೀದಿಬದಿ ವ್ಯಾಪಾರಿಗಳು  ಮನೆಗೆಲಸದವರು ಗಾರ್ಮೆಂಟ್ಸ್, ಕಾರ್ಮಿಕರು, ಫೋಟೊ ವಿಡಿಯೋಗ್ರಾಫರ್, ದಿನಪತ್ರಿಕೆ ವಿತಕರು,  ಬೀಡಿಕಾರ್ಮಿಕರು, ಹಾಗೂ ಚಿಂದಿ ಆಯುವವರು, ಅಕ್ಕಿಪಿಕ್ಕಿ ಜನಾಂಗಕ್ಕೆ  ಸೇರಿದಂತೆ ಇತರರು ಯಾವುದೇ ಪ್ಯಾಕೇಜ್ ನೀಡದೇ ತಾರತಮ್ಯ ಎಸಗಿದೆ. ಕೂಡಲೇ ಅಂತವರ ನೆರವಿಗೆ ಮುಖ್ಯಮಂತ್ರಿಗಳು ಧಾವಿಸಬೇಕೆಂದರು. ಶೀಘ್ರದಲ್ಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವುದಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos