ಗಂಡು ಮಗುವಿಗೆ ಜನ್ಮ ನೀಡಿದ ಗುಡ್ಡಿ

ಗಂಡು ಮಗುವಿಗೆ ಜನ್ಮ ನೀಡಿದ ಗುಡ್ಡಿ

ಜೈಪುರ, ನ. 25 : ಜೈಪುರದ ಮಹಿಳೆಯೊಬ್ಬಳು ಗಂಡು ಮಗುವಿಗೋಸ್ಕರ ಬರೋಬ್ಬರಿ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿ ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನೆರೆಹೊರೆಯವರ ಬಾಯಿಮುಚ್ಚಿಸಿದ್ದಾಳೆ. ನ. 20ರಂದು ಗಿಡ್ಡು ನಗರ ಆಸ್ಪತ್ರೆಯಲ್ಲಿ 12ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೆ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದು, ಆಘಾತಕಾರಿ ಅನುಭವವಾಗಿದೆ ಎಂದು ಗಿಡ್ಡು ಹೇಳುತ್ತಾಳೆ. 42 ವರ್ಷದ ಗಿಡ್ಡುವಿನ ಪತಿ ಕೂಡ ಸಂತತಿ ಮುಂದುವರಿಯಲು ಗಂಡು ಮಗು ಬೇಕು ಎಂದು ಆಸೆ ಪಟ್ಟಿದ್ದರು. ಅಲ್ಲದೆ ಪತಿ ಕೃಷ್ಣ ಕುಮಾರ್ ಕೂಡ ಗಂಡು ಮಗು ಇಲ್ಲದೆ ನೊಂದಿದ್ದರು. ಸದ್ಯ ಗಂಡು ಮಗು ಹುಟ್ಟಿರುವುದು ಎಲ್ಲರಿಗೂ ಸಂತಸ ತಂದಿದೆ.
ನವೆಂಬರ್ 20ರಂದು ಗುಡ್ಡಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos