ಸಾರಿಗೆ ಸಿಬ್ಬಂದಿಗಳಿಗೆ ಸಿಹಿ ಸುದ್ದಿ!

ಸಾರಿಗೆ ಸಿಬ್ಬಂದಿಗಳಿಗೆ ಸಿಹಿ ಸುದ್ದಿ!

ಬೆಂಗಳೂರು: ನಮ್ಮ ರಾಜ್ಯದಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ಅವಲಂಬಿತವಾಗಿರುವುದೆಂದರೆ ಅದು ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಸಾರಿಗೆಗೆ ಹೆಚ್ಚು ಜನರು ಅವಲಂಬಿತವಾಗಿದ್ದಾರೆ. ನಮ್ಮ ಸಿಲಿಕಾನ್ ಸಿಟಿಯಲ್ಲಿ ನಮ್ಮ ಜೀವನ ಪ್ರಾರಂಭವಾಗುವುದು ಸಹ ಬಿಎಂಟಿಸಿ ಬಸ್ ನಿಂದಲೇ, ನಮ್ಮ ದಿನ ಮುಗಿಯುವುದು ಸಹ ಬಿಎಂಟಿಸಿ ಬಸ್ ನಿಂದಲೇ. ಹಲವಾರು ಮಂದಿ ಅಫೀಸ್ಗೆ ಹಾಗೂ ಶಾಲಾ ಕಾಲೇಜು ಇನ್ನಿತರೆ ಒಡಾಟಕ್ಕೆ ಬಿಎಂಟಿಸಿ ಬಸ್ಸ್ ಗೆ ಅವಲಂಬಿತರಾಗಿದ್ದಾರೆ.
ಸಾರಿಗೆ ಸಿಬ್ಬಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹಿ ಸುದ್ದಿ ನೀಡಿದ್ದಾರೆ. ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಚಾಲಕರಿಗೆ ವಸತಿ ಯೋಜನೆ ನೀಡಲು ವಸತಿ ಇಲಾಖೆಗೆ ಪತ್ರ ಬರೆದಿದ್ದೇನೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 4 ಕೋಟಿ 7 ಲಕ್ಷ ರೂ. ಕೊಡಲಾಗಿತ್ತು. ಈ ಬಾರಿ 17 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು. ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸಾರಿಗೆ ಇಲಾಖೆಯಿಂದ ಇನ್ನೂ ಎರಡ್ಮೂರು ತಿಂಗಳಲ್ಲಿ ಅಗ್ರಿಗೇಟರ್ ಆ್ಯಪ್ ಬಿಡುಗಡೆ ಮಾಡುತ್ತೇವೆ. ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಕೇಳಿದ್ದಾರೆ. ಅದನ್ನು ನೀಡಲು 4370.28 ಕೋಟಿ ಬೇಕಾಗುತ್ತೆ‌ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos