ವಾಹನ ಸವಾರರಿಗೆ ಗುಡ್‌ ನ್ಯೂಸ್‌

ವಾಹನ ಸವಾರರಿಗೆ ಗುಡ್‌ ನ್ಯೂಸ್‌

ಬೆಂಗಳೂರು: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಒಂದು ವರ್ಷದಿಂದ ಬದಲಾಗದೆ ಇರುವುದಕ್ಕೆ ವಾಹನ ಸವಾರರು ಬೇಸರವಾಗಿರುವ ನಡುವೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ದೇಶದ ವಾಹನ ಸವಾರರಿಗೆ ಖುಷಿ ಸುದ್ದಿ ಇದೆ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಪ್ರತಿ ಲೀಟರ್​ಗೆ ಎರಡು ರೂಪಾಯಿ ಕಡಿಮೆಯಾಗಿದೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಈ ಬೆಳವಣಿಗೆ ನಡೆದಿದೆ.

ಪೆಟ್ರೋಲ್​ ಮತ್ತು ಡೀಸೆಲ್​ನ ಪರಿಷ್ಕೃತ ಬೆಲೆಯು ಮಾರ್ಚ್ 15ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗಲಿದೆ ಎಂದು ತೈಲ ಸಚಿವಾಲಯ ಗುರುವಾರ ಸಂಜೆ ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಈಗ ಲೀಟರ್‌ಗೆ 96.72 ರೂ.ಗೆ ಇದೆ. ಹೊಸ ದರ 94.72 ರೂ.ಗಳಾಗಿದ್ದು, ಡೀಸೆಲ್ ಬೆಲೆ ಪ್ರಸ್ತುತ 89.62 ರೂ. ಇದ್ದು, ಹೊಸ ದರ 87.62 ರೂ. ಆಗಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos