ಅಂಗನವಾಡಿ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್!

ಅಂಗನವಾಡಿ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್!

ಬೆಂಗಳೂರು, ಫೆ. 22: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದ 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಲಾಗುವುದು.

ಅಂಗನವಾಡಿ ಮಕ್ಕಳ ದಾಖಲಾತಿ, ಮಕ್ಕಳ ಅಪೌಷ್ಟಿಕತೆ, ಚುಚ್ಚುಮದ್ದು ಸೇರಿದಂತೆ ವಿವಿಧ ಮಾಹಿತಿ ನೀಡಲು ಅನುಕೂಲವಾಗುವಂತೆ ಮಾರ್ಚ್ ಒಳಗೆ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ ನೀಡಲಾಗುವುದು ಎಂದು ಹೇಳಲಾಗಿದೆ.

ರಾಜ್ಯದಲ್ಲಿ 62,580 ಅಂಗನವಾಡಿ, 3331 ಮಿನಿ ಅಂಗನವಾಡಿ ಕೇಂದ್ರಗಳಿದ್ದು 66 ಸಾವಿರ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ ನೀಡಲು 129 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.

10 ಸಾವಿರ ರೂ. ಮೌಲ್ಯದ ಸ್ಯಾಮ್ ಸಂಗ್ ಎ 10 ಎಸ್ ಸ್ಮಾರ್ಟ್ಫೋನ್ ಜೊತೆಗೆ 10000 mah ಬ್ಯಾಟರಿ ಪವರ್ ಬ್ಯಾಂಕ್ ನೀಡಲಾಗುವುದು. 32 ಜಿಬಿ ಮೆಮೋರಿ ಕಾರ್ಡ್, ಸಿಮ್ ಕಾರ್ಡ್ ನೀಡಲಿದ್ದು, ಪ್ರತಿ ತಿಂಗಳು ಇಲಾಖೆಯೇ ಇಂಟರ್ನೆಟ್ ಬಿಲ್ ಪಾವತಿಸಲಿದೆ. ಪ್ರತಿ ಫೋನ್ನಲ್ಲಿ ಸ್ನೇಹ ಆಪ್, ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗುವುದು ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos