ಮೃತ ಕುಟುಂಬಕ್ಕೆ ಪರಿಹಾರ ನೀಡಿ

ಮೃತ ಕುಟುಂಬಕ್ಕೆ ಪರಿಹಾರ ನೀಡಿ

ಕೋಲಾರ: ಕೊರೋನ ವಾರಿಯಾರ್ಸ್ ಗೆ ಬಿಡುಗಡೆ ಮಾಡಿದಂತೆ ಕಾರ್ಯನಿರತ ಪತ್ರಕರ್ತರಿಗೂ 30 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಬಂಗಾರಪೇಟೆ ತಾಲ್ಲೂಕು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಉಪತಹಶೀಲ್ದಾರ್ ಮುಕ್ತಾಂಭ ಮೂಲಕ ಮನವಿ ಸಲ್ಲಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟೈಗರ್ ಮಂಜುನಾಥ್ ಮಾತನಾಡಿ, ಕೋವಿಡ್-19 ಕರ್ತವ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಪೌರ ಕಾರ್ಮಿಕರು ಮತ್ತಿತರಿಗೆ ಕರ್ನಾಟಕ ಸರ್ಕಾರ 30 ಲಕ್ಷ ರೂಗಳನ್ನು ಘೋಷಿಸಿದೆ. ಲಾಕ್ ಡೌನ್ ವೇಳೆ ಎಲ್ಲಾ ಪತ್ರಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೆಂಡತಿ ಮಕ್ಕಳನ್ನು ಮರೆತು ಕೊರೋನ ವಾರಿಯರ್ಸ್ ರೂಪದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಆದರೆ ಸರ್ಕಾರ ಪತ್ರಕರ್ತರನ್ನು ಕಡೆಗಣಿಸಿರುವುದು ದುರದೃಷ್ಠಕರ ಸಂಗತಿ ಎಂದರು.
ಹಲವು ಪತ್ರಕರ್ತ ಮಿತ್ರರು ತಮ್ಮ ಜೀವನವನ್ನೇ ಬಲಿ ಕೊಟ್ಟಿದ್ದಾರೆ. ಅಂತಹವರ ಕುಟುಂಬಗಳಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಿ ನೈತಿಕ ಸ್ಥೈರ್ಯ ತುಂಬಲು ಮುಂದಾಗಿರುವುದು ನಮ್ಮಲ್ಲಿ ಅಪಾರವಾದ ಮತ್ತು ಅತ್ಯಂತ ಗೌರವ ಭಾವನೆ ಮೂಡಿಸಿದೆ ಎಂದರು.
ಕೂಡಲೇ ತಾವುಗಳು ಕಾರ್ಯನಿರತ ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸಿ ಕೊರೋನಾದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಕನಿಷ್ಠ 30 ಲಕ್ಷ ರೂಗಳ ಪರಿಹಾರವನ್ನು ಮಂಜೂರು ಮಾಡಲು ಕ್ರಮವಹಿಸಬೇಕೆಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos