ಗತವೈಭವ ಸಾರುವ ಸ್ಮಾರಕಗಳ ನಿರ್ಲಕ್ಷ್ಯ

ಗತವೈಭವ ಸಾರುವ ಸ್ಮಾರಕಗಳ ನಿರ್ಲಕ್ಷ್ಯ

ಬೆಂಗಳೂರು, ಆ. 6: ನಾಡಿನ ಪರಂಪರೆ ಗತವೈಭವ ಸಾರುವ ಐತಿಹಾಸಿಕ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಕಡೆಗಣಿಸುತ್ತಿದೆ. ಇತ್ತೀಚೆಗೆ ಬೆಳಕಿಗೆ ಬಂದ ಶಾಸನಗಳ ಸಂರಕ್ಷಣೆ ಬಗ್ಗೆ ನಿರಾಸಕ್ತಿ ತೋರುತ್ತಿದೆ ಎಂಬುದಕ್ಕೆ ದೇವನಹಳ್ಳಿ ತಾಲ್ಲೂಕಿನಲ್ಲಿ ಹೌದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಐತಿಹಾಸಿಕ ಟಿಪ್ಪು ಕೋಟೆಯಿಂದ  ಗಮನ ಸೆಳೆಯುವ ದೇವನಹಳ್ಳಿ ಇತಿಹಾಸ ತಜ್ಞರ ಮೆಚ್ಚಿನ ತಾಣ. ಇತ್ತೀಚೆಗೆ ಬಿನ್ನಿಮಂಗಲ, ಬಚ್ಚಹಳ್ಳಿ, ಸುಣ್ಣಘಟ್ಟ, ಕಾರಹಳ್ಳಿ, ಆವತಿ, ಮುದುಕುರ್ಕಿ, ಗಮಗವಾರ ಸೇರಿ ಅನೇಕ ಕಡೆಗಳಲ್ಲಿ ಶಿಲಾ ಶಸನಗಳು ಪತ್ತೆ ಆಗಿವೆ. ಇವುಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಿಲ್ಲ ಎಂದು ಇಲ್ಲಿನ ನಾಗರಿಕರು ಅಸಮದಾನ ವ್ಯಕ್ತಪಡಿಸಿದ್ದಾರೆ.

ಸಂಶೋಧನೆ ಅಗತ್ಯ

ದೇವನಹಳ್ಳಿ ಗಂಗವಾಡಿಯ ಭಾಗವಾಗಿದ್ದು, ರಾಷ್ಟ್ರಕೂಟ, ಪಲ್ಲವ, ಗಂಗ ಹೋಯ್ಸಳ, ಚೋಳರ   ಆಳ್ವಕೆಗೊಳಪಟ್ಟಿತ್ತು. ಎಂಬುದನ್ನು ಇಲ್ಲಿ ಪತ್ತೆಯಾಗಿರುವ ಶಾಸನಗಳು ಸಾರುತ್ತಿವೆ. ಫೋಲನಹಳ್ಳಿ, ಯಂಬ್ರಹಳ್ಳಿ, ಚನ್ನಹಳ್ಳಿ, ಲಿಂಗಧೀರಗೊಲ್ಲಹಳ್ಳಿ, ಕಾರೇಹಳ್ಳಿ, ಮಾಕುಂದಾಣ ಸೇರಿ ಹಲವಾರು ಹಳ್ಳಿಗಳಲ್ಲಿ ಪುರಾತನ ಶಾಸನಗಳು ಪತ್ತೆ ಆಗಿವೆ. ಇಲ್ಲಿ ಪತ್ತೆ ಆಗಿರುವ ಶಾಸನಗಳು ಯಾರ ಕಾಲದ ಆಳ್ವಿಕೆಗೆ ಸೇರಿವೆ ಎಂಬುದರ ಸಂಶೋದನೆ ಆಗಬೇಕಿದೆ.

ತ್ರಿಭಾಷೆಯ ಲಿಪಿಗಳು

ಹಲವು ಗ್ರಾಮಗಳಲ್ಲಿನ ಕೆರೆ ತೂಬು ಕಲ್ಲಿನ ಮೇಲೆ ಪ್ರಾಚೀನ ಶಾಸನಗಳು ಕಂಡು ಬರುತ್ತಿವೆ. ಕಾಲಘಟ್ಟದಲ್ಲಿ ಹುದುಗಿರವ ಅನೇಕ ಶಾಸನದ ಕಲ್ಲುಗಳು ನಗರೀಕರಣದಿಂದಾಗಿ ಬೆಳಕಿಗೆ ಬರುತ್ತಿವೆ. ಕುಂದಾಣ ಹೋಬಳಿಯ ಲಿಂಗಧೀರಗೊಲ್ಲಹಳ್ಳಿ ಕಂಬದ ಕಲ್ಲಿನ ಮೇಲೆ ಕನ್ನಡ ತೆಲುಗು, ತಮಿಳು ಲಿಪಿ ಕಂಡು ಬಂದಿದ್ದು, ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದೆ.

ನಿಧಿಗಳ್ಳರಿಂದ ಬೆಳಕಿಗೆ

ಇತ್ತೀಚಿನ ದಿನಗಳಲ್ಲಿ ನಿಧಿಗಳ್ಳರ ಹಾವಳಿ ಮಿತಿ ಮೀರಿದೆ. ಪುರಾತನ ದೇವಾಲಯ, ಶಾಸನಗಳಿವೆ ಎಂಬುದನ್ನು ಅರಿತು ಅಂತಹ ಕಡೆಗಳಲ್ಲಿ ವಾಮಾಚಾರ ಮಾಡುವುದು, ಶಾಸನಗಳ ಅಡಿ ನಿಧಿ ಇಟ್ಟಿರುತ್ತಾರೆಂಬ ಮೂಢ ನಂಬಿಕೆಯಿಂದ ಭೂಮಿಯಲ್ಲಿ ಹೂತಿರುವ ಕಲ್ಲುಗಳನ್ನು  ಬಗೆದು ಹೊರ ತೆಗೆಯುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಾರೆ ಕೋಲಿನಿಂದ ನಿಧಿ ಬಗೆಯುವುದರಿಂದ ಶಾಸನಗಳು ವಿರೂಪಗೊಳ್ಳುತ್ತಿವೆ. ಎಂದು ತಿಳಿಸಿದ್ದಾರೆ.

ಕುರುಹು ಪತ್ತೆ

ಮಾಸ್ತಿಗಲ್ಲು, ವೀರಗಲ್ಲು ಪಾಳು ಬಿದ್ದ ಐತಿಹಾಸಿಕ ಕಟ್ಟಡಗಳಲ್ಲಿ ಹುಡುಕಾಟ ನಡೆಸಿದ ವೇಳೆ ಬೆಳಕಿಗೆ ಬಂದಿವೆ. ಅರದೇಶನಹಳ್ಳಿ ಬಳಿ ರಾಷ್ಟ್ರಕೂಟ,  ಚೋಳ ಮತ್ತು ಚಾಲುಕ್ಯರ ಶಾಸನ ಪತ್ತೆ ಆಗಿದ್ದು, ಕಾರಹಳ್ಳಿ ಬಳಿ ತುರುಗೋಳ್ ಶಾಸನ, ನಂದಿಬೆಟ್ಟದಹತ್ತಿರ ಕುರುವತ್ತಿ ಶಾಸನ, ಬನ್ನಿಮಂಗಲ ಕೆರೆ ತೂಬಿನ ಕಲ್ಲಿನ‌ಮೇಲೆ ಕೆತ್ತಿರುವ ಶಾಸನ ಆಕರ್ಷಣೆ ಯಾಗಿದೆ. ಕನ್ನಡ ಲಿಪಿ ಸೇರಿ 20 ಕ್ಕೂ ಅಧಕ ತಮಿಳು,‌ ಕನ್ನಡ, ತೆಲುಗು ಶಾನಗಳು ಪುರಾತತ್ತ್ವ ಇಲಾಖೆಯನ್ನು ಕೈಬೀಸಿ ಕರೆಯತ್ತಿವೆ.

ಕಂಬ ಶಾಸನ: ಕುಂದಾಣ ಹೋಬಳಿಯ ಲಿಂಗಧೀರಗೊಲ್ಲಹಳ್ಳಿಯ ಬಸವೇಶ್ವರ ದೇವಾಲಯದಲ್ಲಿ ಕೆತ್ತಲಾಗಿರುವ ಕಂದ ಶಿಲಾಶಾಸನ ಪತ್ತೆ ಆಗಿದೆ. ಅನಾಥವಾಗಿ ಬಿದ್ದಿದ್ದ ಕಲ್ಲನ್ನು ಇತಿಹಾಸ ಅನ್ವೇಷಕ ಬಿಟ್ಟಸಂದ್ರ ಬಿ.ಜಿ ಗುರುಸಿದ್ದಯ್ಯ ಅವರ ಕಣ್ಣಿಗೆ ಬಿದ್ದಿದೆ. ಸಂಶೋಧಕ ಪ್ರೋ.ಕೆ.ಆರ್.ನರಸಿಂಹನ್ ಹಾಗೂ ಗೋಪಾಲಗೌಡ ಕಲ್ವಮಂಜಲಿ  ಜಂಟಿ ಅದ್ಯಯನ ನಡೆಸಿ 1449 ನೇ ಕಾಲದ ಶಾಸನ ಎಂದು ಅಂದಾಜಿಸಿದ್ದಾರೆ.

ತಾಲ್ಲೂಕಿನಲ್ಲಿ ದೊರೆತಿರುವ ಅನೇಕ ಶಾಸನಗಳು ಪುರಾತತ್ವ ಇಲಾಖೆಯಲ್ಲಿದಾಖಲಾಗಿಲ್ಲ. ಇವುಗಳ ಸಂಶೋಧನೆ ಅಗತ್ಯವಿದೆ. ಈಗ ದೊರೆತಿರುವ ಶಾಸನದ ಕಲ್ಲುಗಳು ಶತಮಾನದಷ್ಟು ಹಳೆಯದ್ದು ಎಂಬುದರಲ್ಲಿ ಅನುಮಾನವಿಲ್ಲ ಎಂದು ಇತಿಹಾಸ ಸಂಶೋಧಕ ಪ್ರೋ ಕೆ ಆರ್ ನರಸಿಂಹನ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos