ಗಣೇಶೋತ್ಸವ ಪ್ರಯುಕ್ತ ಶಾಂತಿ ಸಭೆ

ಗಣೇಶೋತ್ಸವ ಪ್ರಯುಕ್ತ ಶಾಂತಿ ಸಭೆ

ಕೊಟ್ಟೂರು: ತಾಲೂಕಿನ ಬಾಲಾಜಿ ಕನ್ವೇಷನ್ ಹಾಲ್‍ನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಬುಧವಾರ ಏರ್ಪಡಿಸಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಸ್.ಪಿ ಹಾಲಸ್ವಾಮಿ ರವರು ಸರ್ಕಾರದ ಆದೇಶದ ಮೇರೆಗೆ ಈ ಹಬ್ಬಕ್ಕೆ ಅನುಮತಿ ನೀಡಲಾಗುವುದು. ಆದರಿಂದಾಗಿ ಷರತ್ ಅನ್ವಯ ಗಣೇಶ ಕೂರಿಸಲು ಕಮಿಟಿ ರಚನೆ ಮಾಡಬೇಕಾಗಿದೆ. ಈ ಕಮಿಟಿಯು ಪ್ರತಿಯೊಬ್ಬ ಆಯೋಜಕರ ಹೆಸರು ಮತ್ತು ವಿಳಾಸ ವನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಸೋಶಿಯಲ್ ಮೀಡಿಯಾ ದಲ್ಲಿ ಬರುವ ಗಣೇಶ ವೈಭವವನ್ನು ಅನುಸರಿಸದೇ ನಿಮ್ಮ ಊರಿನಲ್ಲಿ ನಡೆಯುವ ಗಣೇಶ ಹಬ್ಬವು ಸರ್ಕಾರದ ಮಾರ್ಗಸೂಚಿಯಂತೆ ಪಾಲನೆ ಮಾಡಬೇಕು. ಕೆ.ಇ.ಬಿ ಇಂದ ಪ್ರತಿ ಕಮಿಟಿಯು ವಿದ್ಯುತ್ ಸರಬರಾಜುಗೆ ಅಧಿಕೃತವಾಗಿ ಅನುಮತಿ ತೆಗೆದುಕೊಳ್ಳಬೇಕು. ಯಾವುದೇ ಸಮಸ್ಯೆ ಕಂಡು ಬಂದರೆ ಕಮಿಟಿಯ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದರು.

ಪ್ರತಿ ವಾರ್ಡ್ಗೆ ಒಂದೇ ಗಣೇಶ ಕೂರಿಸಲು ಅವಕಾಶವಿದೆ ಮತ್ತು ಪ್ರತಿಯೊಬ್ಬರೂ ಮಾಸ್ಕ್ ಸಾಮಾಜಿಕ ಅಂತರ. ಕೋವಿಡ್ ನಿಯಮನುಸಾರವಾಗಿ ಹಬ್ಬವನ್ನು ಆಚರಣೆ ಮಾಡಬೇಕಾಗುತ್ತದೆ ಎಂದು ಸಭೆಯ ಅಧ್ಯಕ್ಷತೆಯನ್ನು ಉದ್ದೇಶಿಸಿ ಮಾನ್ಯ ತಾಲೂಕು ದಂದಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ಈ ಸಂರ್ದಭದಲ್ಲಿ ಮಾತನಾಡಿದ ಸಿ.ಪಿ.ಐ ಮುರುಗೇಶ್ ಗಣೇಶ ಕೂರಿಸುವವರು ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಜೂಜು ಡ್ರಿಂಕ್ಸ್ ಪಾರ್ಟಿ ಅಂತಹ ಕೆಟ್ಟ ಚಟುವಟಿಕೆಯನ್ನು ಮಾಡಿದ್ದೂ ಕಂಡು ಬಂದರೆ ಇಂತವರ ಮೇಲೆ ಕಾನೂನು ಕ್ರಮತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಈ ವೇಳೆ ಪಿ.ಎಸ್.ಐ ನಾಗಪ್ಪ, ಹೊಸಹಳ್ಳಿ ಪಿ ಎಸ್ ಐ ತಿಮ್ಮಣ್ಣ, ಪ ಪಂ ಅಧ್ಯಕ್ಷೆ ಭಾರತಿ ಸುಧಾಕರ್ ಪಟೇಲ್. ಕ್ರೈಮ್ ಪಿ.ಎಸ್. ಐ ವಡಕಪ್ಪ, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos