ಗಾಂಧಿ ಪದ ತೆಗೆದು ಚುನಾವಣೆಗೆ ಬನ್ನಿ: ಶ್ರೀರಾಮುಲು

ಗಾಂಧಿ ಪದ ತೆಗೆದು ಚುನಾವಣೆಗೆ ಬನ್ನಿ: ಶ್ರೀರಾಮುಲು

ಶಿವಮೊಗ್ಗ ಮಾ. 28, ನ್ಯೂಸ್ ಎಕ್ಸ್ ಪ್ರೆಸ್: ಶಿವಮೊಗ್ಗದಲ್ಲಿ ಸೇರಿರುವ ಜನರನ್ನು ನೋಡಿದರೆ ವಿರೋಧ ಪಕ್ಷಗಳು ಧೂಳಿಪಟವಾಗುತ್ತವೆ ಎಂಬ ಸೂಚನೆ ಕಂಡುಬರುತ್ತಿದೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಅಬ್ಬರಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತ ನಾಡಿದ ರಾಮುಲು, ಮೋದಿಯವರ ಸಾಧನೆಯಿಂದ ನಾವು ಭಾರತೀಯ ಎಂದು ಹೆಮ್ಮಯಿಂದ ಹೇಳಿಕೊಳ್ಳುವ ವಾತವರಣ ಇದೆ. ರಾಹುಲ್ ಗಾಂಧಿಗೆ ಮೋದಿಯವರನ್ನು ಟೀಕಿಸುವ ಶಕ್ತಿ ಇಲ್ಲ. ರಾಹುಲ್ ಗಾಂಧಿಗೆ ತಾಕತ್ತಿದ್ದರೆ ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ನಾವಿಲ್ಲ ಅಂತಾ ಹೇಳಲಿ ಎಂದು ಸವಾಲು ಹಾಕಿದರು.

ರಾಹುಲ್ ಗಾಂಧಿ ಸೋನಿಯಾ ಗಾಂಧಿ ಬೇಲ್ ಮೇಲೆ ಇದ್ದಾರೆ. ರಾಹುಲ್ ಗಾಂಧಿ ನೀವು ಗಾಂಧಿ ಎಂಬ ಪದವನ್ನು ತೆಗೆದು ಚುನಾವಣೆಗೆ ಬನ್ನಿ ನೋಡೋಣ ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos