ಕರ್ಬೂಜ ಹಣ್ಣಿನಲ್ಲಿ ಅಡಗಿದೆ ನಮ್ಮ ಸೌಂದರ್ಯ

ಕರ್ಬೂಜ ಹಣ್ಣಿನಲ್ಲಿ ಅಡಗಿದೆ ನಮ್ಮ ಸೌಂದರ್ಯ

ಬೆಂಗಳೂರು: ಬೇಸಿಗೆಯಲ್ಲಿ ಕರ್ಬೂಜ ಹಣ್ಣಿನ ಸೇವನೆಯಿಂದ ದೇಹಕ್ಕೆ ತಂಪು ಸಿಗುತ್ತದೆ, ಜೊತೆಗೆ ಚೈತನ್ಯ ಹೆಚ್ಚಲು ಇದು ಸಹಕಾರಿ. ಇದರೊಂದಿಗೆ ಚರ್ಮದ ಆರೋಗ್ಯದಿಂದ ಮಲಬದ್ಧತೆ ನಿವಾರಣೆವರೆಗೆ ಇದರಲ್ಲಿದೆ ಹಲವು ರೀತಿಯ ಪ್ರಯೋಜನವಾಗಿದೆ.

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಎಂದರೆ ಅದು ಕರ್ಬೂಜ ಹಣ್ಣು  ದೇಹವನ್ನು ತಂಪಾಗಿಸುತ್ತದೆ ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ. ಚರ್ಮದ ಹಲವು ಸಮಸ್ಯೆಗಳಿಗೆ ಕರ್ಬೂಜ ಹಣ್ಣಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ತಿಳಿಯೋಣ ಬನ್ನಿ.

ಕಾಲು ಕಪ್ ಕರ್ಬೂಜ ಹಣ್ಣಿನ ತಿರುಳು ಹಾಗೂ ಹಾಲಿನ ಕೆನೆಗೆ ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಲೆಪ್ಪಿಸಿಕೊಂಡು ಅರ್ಧ ಗಂಟೆ ನಂತರ ತೊಳೆದರೆ ಚರ್ಮ ಕಾಂತಿಯುತವಾಗುತ್ತದೆ.

ಕರ್ಬೂಜ ಹಣ್ಣಿನ ತಿರುಳಿಗೆ ಎಳನೀರು ಸೇರಿಸಿ ಕುತ್ತಿಗೆ ಕೈ ಕಾಲುಗಳಿಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆಯ ನಂತರ ಸುಚಿಗೊಳಿಸಿಕೊಂಡರೆ ಒಣ ಚರ್ಮ ಮೆರುಗು ಪಡೆದುಕೊಳ್ಳುತ್ತದೆ.

ಕರ್ಬೂಜ ಹಣ್ಣಿನ ಬೀಜಗಳನ್ನು ನೀರಿನಲ್ಲಿ ಕುದಿಸಿ ತನಿಸಿ ಶೋಧಿಸಿ ಕುಡಿದರೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಕರ್ಬೂಜ ಹಣ್ಣಿನ ತಿರುಳು ಬಾಳೆಹಣ್ಣು ಹಾಗೂ ಪಪಾಯ ಹಣ್ಣಿನ ತಿರುಳುಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿದರೆ ಕಪ್ಪು ಕಲೆಗಳು ದೂರವಾಗುತ್ತದೆ. ದಿನಕ್ಕೆರಡು ಬಾರಿ ಕರ್ಪೂರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕಜ್ಜಿ ಗಜಕರ್ಣ ಮುಂತಾದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos