ಅಕ್ರಮ ಚಟುವಟಿಕೆಗಳ ಉದ್ಯಾನವನಕ್ಕೆ ಮುಕ್ತಿ

ಅಕ್ರಮ ಚಟುವಟಿಕೆಗಳ ಉದ್ಯಾನವನಕ್ಕೆ ಮುಕ್ತಿ

ಹೊಸಕೋಟೆ: ಸೊಣ್ಣದೇನಹಳ್ಳಿ ಬಳಿಯ ಹತ್ತು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ನಿರ್ಮಾಣವಾಗಿದ್ದ ಪಾರ್ಕ್ನಲ್ಲಿ ಗಿಡ ಗೆಂಟೆ ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಈ ಪಾರ್ಕ್ನ್ನು ಶಾಸಕರ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಟೀಂ ಎಸ್.ಬಿ.ಜಿ ತಂಡದ ೧೫೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸ್ವಚ್ಚತೆ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಟ್ಟರು.
ಹೊಸಕೋಟೆ ತಾಲೂಕಿನ ಬೆಂಗಳೂರು -ಚಿಂತಾಮಣಿ ರಾಜ್ಯ ಹೆದ್ದಾರಿ ಪಕ್ಕದ ಸೊಣ್ಣದೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಈ ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದೆ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಈ ಪಾರ್ಕ್ ಆಶ್ರಯತಾಣವಾಗಿತ್ತು. ಅಲ್ಲದೆ ಹಲವು ಬಾರಿ ಕೊಲೆಯಾದ ವ್ಯಕ್ತಿಗಳನ್ನು ಸಹ ಇಲ್ಲಿ ತಂದು ಎಸೆದು ಹೋದ ಪ್ರಕರಣಗಳು ಸಹ ನಡೆದಿವೆ.
ಸಂಜೆ ಹೊತ್ತು ಮದ್ಯವ್ಯಸನಿಗಳ ಅಡ್ಡೆಯಾಗಿತ್ತು. ಸಾರ್ವಜನಿಕರು ವಾಯು ವಿಹಾರಕ್ಕೆ ಬರಲು ಹೆದರುವಂತಾಗಿ ಇಲ್ಲಿ ಉದ್ಯಾನವನ ಇದೆ ಎಂಬುದೆ ತಿಳಿಯದಾಗಿತ್ತು. ಇದೀಗ ಟೀಂ ಎಸ್.ಬಿ.ಜಿ ತಂಡದ ಶ್ರಮದಿಂದ ಪೂರ್ಣವಾಗಿ ಸ್ವಚ್ಚಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ.
ಕೋಟ್
ಸುತ್ತ ಮುತ್ತಲಿನ ಪರಿಸರದ ಸ್ವಚ್ಚವಾಗಿಡಲು ಕಾಳಜಿ ತೊರಿಸುತ್ತಾರೆ. ಪ್ರತಿಯೊಂದು ಅಭಿವೃದ್ಧಿ ಕಾರ್ಯವೂ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಸಾರ್ವಜನಿಕರ ಸಹಕಾರ ಇದ್ದರೆ ಎಂತಹ ಕಡು ಕಷ್ಟದ ಕೆಲಸವೂ ಸುಲಭವಾಗಿ ಮಾಡಬಹುದು ಎಂಬುದಕ್ಕೆ ಟೀಂ ಎಸ್.ಬಿ.ಜಿ ತಂಡದ ಕಾರ್ಯ ಸಾಕ್ಷಿಯಾಗಿದೆ – ಪ್ರತಿಭಾ ಶರತ್ ಬಚ್ಚೇಗೌಡ
ಸ್ವಚ್ಚತಾ ಕಾರ್ಯದಲ್ಲಿ ಮುಖಂಡರಾದ ಎಲ್.ಎನ್ ಟಿ ಮಂಜುನಾಥ್ ಟೀಂ ಎಸ್.ಬಿ.ಜಿ ತಂಡದ ಸದಸ್ಯರುಗಳಾದ ಅರಳಗೆರೆ ಮುನಿರಾಜು , ರಾಕೇಶ್ , ಕೆ.ಸಿ.ಸುರೇಶ್ ಗೌಡ , ಚಂದ್ರೇಗೌಡ , ಶ್ರೀನಿವಾಸ್ , ಆಂಜಿನಪ್ಪ , ದೇವರಾಜ್ , ಆರ್.ಟಿ.ಸಿ.ಗೋವಿಂದರಾಜ್ , ಸೋಲಾರ್ ಮಂಜುನಾಥ್ , ಮೈಲಾಪುರ ಪ್ರಕಾಶ್ , ಅವಿನಾಶ್ ಗೌಡ , ನಡವತ್ತಿ ದಯಾನಂದ್ , ವಿಜಯ್ ಕುಮಾರ್ , ನವೀನ್ ಮತ್ತಿತರರು ಹಾಜರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos