ಕಂಪನಿ ಹೆಸರಲ್ಲಿ ಮೋಸ

ಕಂಪನಿ ಹೆಸರಲ್ಲಿ ಮೋಸ

ಬೆಂಗಳೂರು, ನ. 18: ಖಾಸಗಿ ಕಂಪನಿಗಳು ರೈತರ ಹೆಸರಿನಲ್ಲಿ ಕರ್ನಾಟಕ ಪೌಲ್ಟ್ರಿ ಫಾರ್ಮಸ್ಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ಸಂಸ್ಥೆಯನ್ನು ಸ್ಥಾಪಿಸಿ ಕೋಳಿ ಮಾಂಸ ಉತ್ಪಾದನೆ ಮಾಡುವ ರೈತರಿಗೆ  ಶೋಷಣೆ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಖಾಸಗಿ ಕಂಪನಿಗಳು ಹೈಬ್ರಿಡ್ ತಳಿ ಹೆಸರಿನಲ್ಲಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕಾಲಿಟ್ಟ ಕಂಪನಿಗಳು ದೇಶದ ಆಹಾರ ಭದ್ರತೆಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳವ ಉದ್ದೇಶದಿಂದ ಉದ್ಯಮದಲ್ಲಿ ರೈತರನ್ನು ನಷ್ಟಕ್ಕೆ ಸಿಲುಕಿಸುತ್ತಿವೆ ಎಂದರು.

ಖಾಸಗಿ ಕಂಪನಿಗಳು ರೈತರಿಗೆ ಕೋಳಿ ಮರಿಗಳನ್ನು ಸಾಕಲು ಉತ್ಪಾದನಾ ವೆಚ್ಚವನ್ನು ರೈತರಿಗೆ ನೀಡಿ ಕಡಿಮೆ ಬೆಲೆಯಲ್ಲಿ ಮಾಂಸವನ್ನು ಪಡೆದು ಹೆಚ್ಚಿನ ಬೆಲೆಗೆ ಕಂಪನಿಗಳು ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಇದರಿಂದ ಸ್ವಂತ ಕೋಳಿ ಸಾಕಾಣಿಕೆ ಮಾಡಿ ಮಾರಾಟ ಮಾಡುವವರಿಗೆ ತುಂಬಾ ತೊಂದರೆಯಾಗುತ್ತಿದೆ ಹಾಗಾಗಿ ಈ ಕಂಪನಿಗಳು ಮಾಡುತ್ತಿರುವ ಶೋಷಣೆಯನ್ನು ತಡೆಯಬೇಕು ಎಂದು ಮನವಿ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos