ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಿನ್ಸಿಪಾಲ್ ಶವವಾಗಿ ಪತ್ತೆ

  • In State
  • January 11, 2019
  • 237 Views
ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಿನ್ಸಿಪಾಲ್ ಶವವಾಗಿ ಪತ್ತೆ

ತುಮಕೂರು: 1 ತಿಂಗಳ ಹಿಂದೆ ನಾಪತ್ತೆಯಾಗಿದ್ದ ತುಮಕೂರು ವಿವಿಯ ವಿಜ್ಞಾನ ವಿಭಾಗದ ಪ್ರೊ.ಈಶ್ವರ್(57) ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆಗಿದೆ.

ಡಿಸೆಂಬರ್‍ 9ರಂದು ಈಶ್ವರ್ ವಾಯುವಿಹಾರಕ್ಕೆ ಹೋಗಿದ್ದವರು ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದರು. ಈಶ್ವರ್ ಅವರ ನಾಪತ್ತೆ ಪ್ರಕರಣ ತುಮಕೂರು ವಿವಿಯ ಹಲವು ವ್ಯಕ್ತಿಗಳ ಮೇಲೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಹಿಂದೆ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಈಶ್ವರ್ ಕಾರ್ಯ ನಿರ್ವಹಿಸಿದ್ದರು.

ಸಂದರ್ಭದಲ್ಲಿ ಇವರಿಗೆ ಇನ್ನೂ ಮಾನ್ಯತೆ ಇಲ್ಲ ಎಂದು ಹುದ್ದೆಯಿಂದ ಕೆಳಗಿಳಿಸಿದ್ದರು. ಬಳಿಕ ಸಹೋದ್ಯೋಗಿಗಳು ಸುಖಾಸುಮ್ಮನೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ನಮ್ಮ ತಂದೆಯವರು ಹೇಳಿಕೊಂಡಿದ್ದರೆಂದು ಪುತ್ರ ಪವನ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos