ಗರ್ಭಿಣಿ ಮಹಿಳೆಯರಿಗೆ ಸೀಮಂತ

ಗರ್ಭಿಣಿ ಮಹಿಳೆಯರಿಗೆ ಸೀಮಂತ

ಪಾವಗಡ: ತಾಲ್ಲೂಕಿನ ರೊಪ್ಪ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಎಂಟು ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸರ್ಕಾರದ ಆದೇಶದಂತೆ ಪ್ರತಿ ಹಳ್ಳಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರದಲ್ಲಿ ಅವರ ಕುಟುಂಬದವರ ಜೊತೆ ಸೀಮಂತ ಕಾರ್ಯಕ್ರಮ ಜೊತೆ ಅವರು ಗರ್ಭಿಣಿ ಆದಾಗ ಆಹಾರ ಪದ್ಧತಿಗಳ ಬಗ್ಗೆ ಹಾಗೂ ಹಸಿರು ತರಕಾರಿಗಳ ಬಗ್ಗೆ ಹೆರಿಗೆಯ ಸಿದ್ಧತೆಯ ಹಾಗೂ ಸದೃಢ ತಾಯಿಯಾಗಿ ಮಗುವಿಗೆ ಜನ್ಮ ಕೊಡುವ ವಿಷಯವನ್ನು ತಿಳಿಸಿಕೊಡಲಾಯಿತು.
ಮೊದಲನೆ ಗರ್ಭಿಣಿಗೆ ಪ್ರಧಾನ ಮಂತ್ರಿಗಳ ಮಹಾತ್ವಕಾಂಕ್ಷೆ ಆದ ಮಾತೃ ವಂದನಾ ಅರ್ಜಿಯನ್ನು ತೆಗೆದುಕೊಂಡು ಮೊದಲನೇ ಕಂತು ಎರಡನೇ ಕಂತು ಸೇರಿಸಿ ೩೦೦೦ ಹೆರಿಗೆಯ ನಂತರ ೨೦೦೦ ಈ ಯೋಜನೆಯನ್ನು ಎಲ್ಲಾ ಫಲಾನುಭವಿಗಳು ಪಡೆದಿರುತ್ತಾರೆ ಹಾಗೆ ಮೊಳಕೆ ಕಾಳುಗಳನ್ನು ತಿನ್ನುವಂತೆ ಹಾಗೂ ಆರು ತಿಂಗಳು ತುಂಬಿದ ಮಗುವಿಗೆ ಅನ್ನ ಪ್ರಸ್ತಾವ ಕಾರ್ಯಕ್ರಮ ಯೋಜನೆಯ ಉದ್ದೇಶವಾಗಿದೆ ಎಂದರು.
ಪ್ರತಿ ತಿಂಗಳು ಗರ್ಭಿಣಿಯರಿಗೆ ವಾರಕ್ಕೆ ಆರು ಕೋಳಿ ಮೊಟ್ಟೆ ತಿಂಗಳಿಗೆ ಒಂದು ಸಾರಿ ಅಕ್ಕಿ ಬೇಳೆ ಬೆಲ್ಲ ಸಾಂಬಾರ್ ಪೌಡರ್ ಹಾಲಿನ ಪೌಡರ್ ಸಕ್ಕರೆ ಕಡಲೆಬೀಜ ಪ್ರತಿ ತಿಂಗಳ ವಿತರಣೆ ಮಾಡುತ್ತಿದ್ದು ಸದೃಢವಾದ ಮಗುವಿಗೆ ಜನ್ಮ ನೀಡಲು ಇಷ್ಟೊಂದು ಸವಲತ್ತುಗಳನ್ನು ಒದಗಿಸಿದ ಸರ್ಕಾರಕ್ಕೆ ಎಲ್ಲ ತಾಯಂದಿರು ಅಭಿನಂದನೆ ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಸುಶೀಲಮ್ಮ ಶಾರದಮ್ಮ ನೇತ್ರಾವತಿ ಸಹಾಯಕಿಯರ ಗೌರಮ್ಮ ಪುಷ್ಪ ಲಲಿತಾ ಆಶಾ ಕಾರ್ಯಕರ್ತೆ ಶಾರದಾ ಅರುಣ ಮುಬೀನಾ ಎಸ್‌ಡಿಎಂಸಿ ಅಧ್ಯಕ್ಷರಾದ ಸುಧಾ, ಗರ್ಭಿಣಿಯರ ಕುಟುಂಬದವರು ಭಾಗವಹಿಸಿದ್ದರು

ಫ್ರೆಶ್ ನ್ಯೂಸ್

Latest Posts

Featured Videos