ರಣ ಭೂಮಿಯ ಭಯವಿಲ್ಲ : ಪೋಲಿಸ್​ ಆಯುಕ್ತ ಭಾಸ್ಕರ್ ರಾವ್

ರಣ ಭೂಮಿಯ ಭಯವಿಲ್ಲ : ಪೋಲಿಸ್​ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು : ಸಿಬ್ಬಂದಿಗಳು  ಜನರ ಮಧ್ಯೆನೇ ಇರಬೇಕಾಗಿರುತ್ತೆ, ನಾವೇನು ಮಾಡೋಕಾಗಲ್ಲ ಅಂತ ಬಾಗಿಲು ಹಾಕೊಂಡು ಕೂತ್ಕೊಳ್ಳೊಕಾಗಲ್ಲ ಎಂದು ನಗರ ಪೋಲಿಸ್​ ಆಯುಕ್ತ ಭಾಸ್ಕರ್‌ರಾವ್ ಶುಕ್ರವಾರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಎಎಸ್​ಐ ಸಾವನ್ನಪ್ಪಿದ್ದಾಗ ಅವರ ಕುಟುಂಬದವರು ಮುಂದೆ ಬರಲಿಲ್ಲ, ನಮ್ಮ ಸಿಬ್ಬಂದಿಗಳೇ ಅವರ ಅಂತ್ಯ ಸಂಸ್ಕಾರ ಮಾಡಿದೆವು. ಮುಂದೆ ಯಾವುದೇ ಅಪರಾಧಿಗಳನ್ನು ಕರೆ ತರೋಕೆ ಮುಂಚೆ ಅವರಿಗೆ ಕೊವಿಡ್ ಟೆಸ್ಟ್ ಮಾಡಿಸಬೇಕೆಂದು ಸೂಚನೆ ಕೊಟ್ಟಿದ್ದೇನೆ ಅವರು ತಿಳಿಸಿದರು.

ಅಪರಾಧಿಗಳಿಗೆ ಸ್ನಾನ ಮಾಡಿಸಿ, ಉಗುರು ಕತ್ತರಿಸಿ, ಕೋವಿಡ್ ಟೆಸ್ಟ್ ಮಾಡಿಸಬೇಕು. ಮುಂದಿನ ದಿನಗಳಲ್ಲಿ ಸೋಂಕಿನಿಂದ ಬಚವಾದ್ರೆ ಅದೇ ದೊಡ್ಡ ಅಚೀವ್ಮೆಂಟ್. ರಣ ಭೂಮಿಗೆ ಇಳಿದಾಗಿದೆ ಯಾವುದಕ್ಕೂ ಭಯ ಬೀಳಲ್ಲ ಅದನ್ನು ಎದುರಿಸುತ್ತೇವೆ ಎಂದು ಅವರು ನುಡಿದರು. ಸದ್ಯ ಈಗಾಗಲೆ ಮೂವತ್ತಾರು ಜನರಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ ಆರು ಜನ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos