ಅಪ್ಪ-ಮಗನ ಅರೆಸ್ಟ್

ಅಪ್ಪ-ಮಗನ ಅರೆಸ್ಟ್

ತುಮಕೂರು, ಡಿ. 3: ಪಿಎಂಸಿ ಆವರಣದಲ್ಲಿ ಏರ್ಗನ್ ಮೂಲಕ ಗುಂಡು ಹಾರಿಸಿ ನಾಗರಿಕರನ್ನು ಆತಂಕಕ್ಕೀಡು ಮಾಡಿದ್ದ ಅಪ್ಪ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಹೊರಭಾಗದ ಕ್ಯಾತಸಂದ್ರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಬಳಿ ರಾತ್ರಿ 11 ಗಂಟೆ ಸುಮಾರಿನಲ್ಲಿ ಇವರಿಬ್ಬರು ಏರ್ಗನ್ ಹಿಡಿದು ಓಡಾಡುತ್ತಿದುದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆತಂಕಗೊಂಡ ನಾಗರಿಕರು ತಕ್ಷಣ ಎಸ್ಪಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಕ್ಯಾತಸಂದ್ರ ವೃತ್ತ ನಿರೀಕ್ಷಕ ಶ್ರೀಧರ್, ಸಬ್ ಇನ್ಸ್ಪೆಕ್ಟರ್ ರಾಮಪ್ರಸಾದ್ ಅವರು ತೆರಳಿ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ನ್ನು ಪರಿಶೀಲಿಸಿ ಬಂದೂಕು ಹಿಡಿದು ಓಡಾಡುತ್ತಿದ್ದ ಅಪ್ಪ ಮಗನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಎಪಿಎಂಸಿ ಆವರಣದ ಬಳಿ ಕಳ್ಳರು ಬಂದಿದ್ದರು. ಅದಕ್ಕಾಗಿ ನಾವು ಫೈರ್ ಮಾಡಿದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.  ಒಟ್ಟಾರೆ ಇವರು ಲೈಸೆನ್ಸ್ ಇಲ್ಲದ ಏರ್ಗನ್ನನ್ನು ಏತಕ್ಕೆ ಇಟ್ಟುಕೊಂಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

.

 

 

ಫ್ರೆಶ್ ನ್ಯೂಸ್

Latest Posts

Featured Videos