ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌(88)  ನಿಧನರಾಗಿದ್ದಾರೆ.

ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದರು.

ಪಾದ್ರಿಯಾಗಲು ಅಗತ್ಯವಿದ್ದ ತರಬೇತಿ ಹಾಗೂ ಕಲಿಕೆಗಾಗಿ ಅವರ 16ನೇ ವಯಸ್ಸಿನಲ್ಲಿ ಕಳುಹಿಸಲಾಗಿತ್ತು. ಆದರೆ, ಸಮಾಜಮುಖಿಯಾದ ಬೇರೆಯದೇ ಚಿಂತನೆಗಳನ್ನು ಹೊಂದಿದ್ದ ಜಾರ್ಜ್‌ 1949ರಲ್ಲಿ ಬಾಂಬೆಗೆ ತೆರಳಿ, ಕಾರ್ಮಿಕ ಸಂಘನೆಯ ಹೋರಾಟಗಳಲ್ಲಿ ಭಾಗಿಯಾದರು.

ಬೆಂಕಿಯ ಚೆಂಡಿನಂತೆ ಹೋರಾಟಗಳಲ್ಲಿ ಮುನ್ನಡೆಸುತ್ತಿದ್ದ ಜಾರ್ಜ್‌ ಹಲವು ಪ್ರಮುಖ ಪ್ರತಿಭಟನೆಗಳು ಹಾಗೂ ಬಂದ್‌ಗಳ ನೇತೃತ್ವವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos