ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು: ಸಿ ಟಿ ರವಿ

ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು: ಸಿ ಟಿ ರವಿ

ಬೆಂಗಳೂರು: ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಪಕ್ಷ, ದೇಶದ ಹಿತ ನೋಡಿಕೊಂಡು ಈಶ್ವರಪ್ಪ ತೀರ್ಮಾನ ಮಾಡಲಿ ಎಂದು ಮಾಜಿ ಸಚಿವ ಸಿ ಟಿ ರವಿ ಮನವಿ ಮಾಡಿದ್ದಾರೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅಸಮಾಧಾನ ಮತ್ತು ಇಂದು ಬೆಂಬಲಿಗರ ಸಭೆ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈಶ್ವರಪ್ಪ ನಮ್ಮ ಹಿರಿಯ ನಾಯಕರು ಅವರು ಯಾವುದೇ ನಿರ್ಣಯ ತೆಗೆದುಕೊಂಡರೂ ಸಾವಿರ ಬಾರಿ ಯೋಚಿಸಲಿ. ಅವರ ನೋವು, ಅವರ ಭಾವನೆ ನಮಗೆ ಅರ್ಥ ಆಗುತ್ತದೆ ಎಂದರು.

ಶಿವಮೊಗ್ಗ ಕ್ಷೇತ್ರದಲ್ಲಿ ಕೆಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಕೆಎಸ್ ಈಶ್ವರಪ್ಪ ಜೊತೆ ಹೈಕಮಾಂಡ್ ನಾಯಕರು ಮಾತನಾಡುತ್ತಾರೆ. ಕೆ.ಎಸ್ ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು. 3 ಬಾರಿ ಅಧ್ಯಕ್ಷ ಡಿಸಿಎಂ ಆಗಿ ಈಶ್ವರಪ್ಪಕೆಲಸ ಮಾಡಿದ್ದಾರೆ ಈಶ್ವರಪ್ಪಗೆ ವಿನಂತಿ ಮಾಡುತ್ತೇನೆ. ನಿಮ್ಮ ನಿರ್ಣಯ ಪಕ್ಷ ದೇ ಶಕ್ಕೆ ಹಿತವಾಗಬೇಕು. ತಮ್ಮ ನಿರ್ಧಾರವನ್ನ ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.

ಯಾರಿಗೂ ಅಸಮಾಧಾನ ಇಲ್ಲ, ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಒಳಪೆಟ್ಟು ಆತಂಕ ವಿಚಾರದ ಸನ್ನಿವೇಶವಿರಬಹುದು. ಆದರೆ, ಯಾವುದೂ ಒಳಪೆಟ್ಟು ಇರಲ್ಲ. ಎಲ್ಲರ ಜತೆ ವೈಯಕ್ತಿಕವಾಗಿ ಮಾತಾಡುವ ಕೆಲಸ ಆಗಿದೆ. ಒಂದೊಂದು ಮತವೂ ಎಲ್ಲರಿಗೂ‌ ಮುಖ್ಯ, ಒಂದೊಂದು ಸೀಟೂ‌ ಮುಖ್ಯ. ಅಸಮಾಧಾನಿತರ ಮನವೊಲಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos