ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ

ನವದೆಹಲಿ, ಡಿ. 24: ಭಾರತೀಯ ರಿಸರ್ವ್ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಸಹಾಯಕ ಹುದ್ದೆಗಳು ಸೇರಿದಂತೆ 926 ಹುದ್ದೆಗಳಿಗೆ ಆನ್ ಅರ್ಜಿ ಆಹ್ವಾನಿಸಿದೆ.

ಖಾಲಿ ಇರುವ ಒಟ್ಟು 926 ಹುದ್ದೆಗಳಿಗೆ ಆರ್ ಬಿಐ ಅರ್ಜಿ ಆಹ್ವಾನಿಸಿದ್ದು, ಫೆಬ್ರವರಿ 14 ಮತ್ತು 15 ರಂದು ಆನ್ ಲೈನ್ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿದೆ. ಅರ್ಜಿ ಸಲ್ಲಿಸಲು 2020 ಜನವರಿ 16 ಕೊನೆಯ ದಿನವಾಗಿದ್ದು, ಆನ್ ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.

ವಿದ್ಯಾರ್ಹತೆ: ಯಾವುದೇ ಪದವಿಯಲ್ಲಿ ಶೇ. 50 ರಷ್ಟು ಅಂಕ ಗಳಿಸಿರಬೇಕು. (ಎಸ್ ಸಿ-ಎಸ್ ಟಿ ಅಭ್ಯರ್ಥಿಗಳು ಪದವಿಯಲ್ಲಿ ಉತ್ತೀರ್ಣರಾಗಿರಬೇಕು)

ಅರ್ಜಿ ಶುಲ್ಕ: ಸಾಮಾನ್ಯ ಒಬಿಸಿ ಹಾಗೂ ಇಡಬ್ಯ್ಲೂಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 450 ರೂ. ನಿಗದಿಪಡಿಸಲಾಗಿದೆ. ಮೀಸಲು ವರ್ಗಕ್ಕೆ 50 ರೂ. ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲೇ ಪಾವತಿಸಬೇಕಿದೆ. 20 ರಿಂದ 28 ವರ್ಷದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos