ಇಸ್ರೋದಿಂದ ಮತ್ತೊಂದು ಗೂಢಚಾರ ಉಪಗ್ರಹ ಉಡಾವಣೆ!

ಇಸ್ರೋದಿಂದ ಮತ್ತೊಂದು ಗೂಢಚಾರ ಉಪಗ್ರಹ ಉಡಾವಣೆ!

ಬೆಂಗಳೂರು, ಏ. 1, ನ್ಯೂಸ್ ಎಕ್ಸ್ ಪ್ರೆಸ್: ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದೆ. ಶತ್ರು ದೇಶಗಳ ನೆಲೆಗಳಲ್ಲಿರುವ ರೇಡಾರ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಸೋಮವಾರ ಉಡಾವಣೆ ಮಾಡಿದೆ. ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.27ರ ವೇಳೆಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಮತ್ತು ಗಣ್ಯರಲ್ಲದೆ, ಸಾಮಾನ್ಯ ಜನರಿಗೂ ಈ ಉಡಾವಣೆಯನ್ನು ನೇರವಾಗಿ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಇಸ್ರೋದ ಪಿಎಸ್‌ಎಲ್‌ವಿ ಸಿ45 ರಾಕೆಟ್ ಮೂಲಕ ವಿದೇಶಿ ಉಪಗ್ರಹಗಳನ್ನು ಕೂಡ ಬಾಹ್ಯಾಕಾಶಕ್ಕೆ ಸೇರಿಸಲಾಯಿತು. ಅಮೆರಿಕ, ಸ್ಪೇನ್, ಸ್ವಿಟ್ಜರ್ಲೆಂಡ್ ಮತ್ತು ಲಿಥುವೇನಿಯಾದ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿದೆ. ಮೂರು ಕಕ್ಷೆಗಳಲ್ಲಿ ಈ ಉಪಗ್ರಹಗಳು ಬಾಹ್ಯಾಕಾಶವನ್ನು ಸೇರಿಕೊಳ್ಳಲಿವೆ. ಒಂದೇ ಉಡಾವಣೆಯಲ್ಲಿ ಮೂರು ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವ ಪ್ರಯೋಗವನ್ನು ಇಸ್ರೋ ಮೊದಲ ಬಾರಿಗೆ ನಡೆಸಿದೆ. ಎಮಿಸ್ಯಾಟ್ ಬೇಹುಗಾರಿಕಾ ಉಪಗ್ರಹವಾಗಿದ್ದು, ಇದು ವಿದ್ಯುತ್‌ಕಾಂತೀಯ ಮಾಪನದ ಗುರಿ ಹೊಂದಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ಸಂಶೋಧನಾ ಸಂಸ್ಥೆಯು ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರತ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಿದ ಕೆಲವೇ ದಿನಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತೆಗೆ ನೆರವಾಗಬಲ್ಲ ಈ ಮಹತ್ವದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos