ಪ್ರತಿದಿನ ಒಂದು ಸೇಬು ತಿನ್ನಿ

ಪ್ರತಿದಿನ ಒಂದು ಸೇಬು ತಿನ್ನಿ

ಬೆಂಗಳೂರು, ನ. 07: ಪ್ರತಿದಿನಲು ಒಂದು ಸೇಬು ಹಣ‍್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸೇಬಿನ ಸಿಪ್ಪೆಯನ್ನು ತೆಗೆದು ತಿನ್ನುತ್ತಿದ್ದರೆ, ಇನ್ನು ಮುಂದೆ ಸಿಪ್ಪೆಯನ್ನು ಬಿಸಾಕದೇ ಅದರ ಸಹಿತ ತಿನ್ನಿ.

ಆದರೆ ಸಿಪ್ಪೆಯಲ್ಲಿ ಯಾವುದೇ ರಾಸಾಯನಿಕ ಅಂಶ ಹಾಗೂ ಮೇಣವಿಲ್ಲವೆಂದು ಖಚಿತಪಡಿಸಿಕೊಂಡು ತಿಂದರೆ ಉತ್ತಮ.

* ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

* ಸಿಪ್ಪೆಯಲ್ಲಿ ಕ್ಯಾಲ್ಶಿಯಂ, ಪೊಟ್ಯಾಶಿಯಂ, ಫಾಸ್ಪೋರಸ್, ಫೋಲೆಟ್, ಐರನ್ ಮೊದಲಾದ ಪೌಷ್ಟಿಕಾಂಶಗಳಿದ್ದು, ಇದರ ಸೇವನೆಯಿಂದ ಶರೀರದ ಮೂಳೆಗಳು ಸದೃಢವಾಗುತ್ತವೆ.

* ಸಿಪ್ಪೆ ಸಮೇತವಾಗಿ ಸೇಬು ತಿನ್ನುವುದರಿಂದ ದೇಹದ ದುರ್ಬಲತೆ ದೂರವಾಗುತ್ತದೆ ಹಾಗೂ ಕೊಲೆಸ್ಟ್ರಾಲ್ ಮತ್ತು ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡಲು ಸಹಾಯವಾಗುತ್ತದೆ.

* ಸೇಬಿನಲ್ಲಿ ಮಿನರಲ್ಸ್ ಹೆಚ್ಚಾಗಿ ಇರುವುದರಿಂದ ದಂತಕ್ಷಯ ಉಂಟಾಗುವುದಿಲ್ಲ.

* ಸೇಬಿನ ಸಿಪ್ಪೆ ಗರ್ಭಿಣಿಯರಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಸೇಬು ಹಣ್ಣಿನ ಸಿಪ್ಪೆಯಲ್ಲಿ ಸಿಗುವಂತಹ ಅಂಶ ಲಿವರ್, ಬ್ರೆಸ್ಟ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕರಿಸುತ್ತದೆ.

 

 

ಫ್ರೆಶ್ ನ್ಯೂಸ್

Latest Posts

Featured Videos