ವಿಜಯಪುರದಲ್ಲಿ ಮತ್ತೆ ಭೂಕಂಪ

ವಿಜಯಪುರದಲ್ಲಿ ಮತ್ತೆ ಭೂಕಂಪ

ವಿಜಯಪುರ: ನಿನ್ನೆ ತಡ ರಾತ್ರಿ ಜಿಲ್ಲೆಯಲ್ಲಿ ಭೂಕಂಪನ‌ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ತಿಕೋಟಾ ತಾಲೂಕು, ಬಸವನಬಾಗೇವಾಡಿ ತಾಲೂಕಿನ ಮನಗೂಳಿ ವ್ಯಾಪ್ತಿಯಲ್ಲಿ 2.9 ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಚದುರಿ ಸದ್ದು ಮಾಡಿವೆ. ಇದರಿಂದಾಗಿ ಮನೆಗಳಲ್ಲಿ ಟಿ.ವಿ. ನೋಡುತ್ತಿದ್ದ ಊಟ ಮಾಡುತ್ತಿದ್ದ, ವಿಶ್ರಾಂತಿಯಲ್ಲಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos