‘ದರ್ಬಾರ್’ಗೆ ಕರ್ನಾಟಕದಲ್ಲಿ ಕಂಟಕ!

‘ದರ್ಬಾರ್’ಗೆ ಕರ್ನಾಟಕದಲ್ಲಿ ಕಂಟಕ!

ಬೆಂಗಳೂರು, ಜ. 04: ವಿಶ್ವದಾದ್ಯಂತ ರಜನಿಕಾಂತ್ ಅಭಿನಯದ ‘ದರ್ಬಾರ್’  ಸಿನಿಮಾ ಇದೇ ತಿಂಗಳ ದಿನಾಂಕ 9 ರಂದು ತೆರೆಗೆ ಬರುತ್ತಿದೆ. ಈ ಚಿತ್ರವು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಆಗಿದ್ದು, ತೆಲುಗು ಅವತರಣಿಕೆಯು ಮೆಜೆಸ್ಟಿಕ್ ನ ನರ್ತಕಿ ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ.

ಈ ಚಿತ್ರದ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಈ ಕನ್ನಡದ ಚಿತ್ರಗಳಿಗೆ ಪ್ರಮುಖ ಚಿತ್ರಮಂದಿರ ಎನಿಸಿಕೊಂಡಿರುವ ನರ್ತಕಿಯಲ್ಲಿ ಈ ಚಿತ್ರವು ಪ್ರದರ್ಶನ ಮಾಡಲಾಗುತ್ತಿದೆ. ಹೀಗಾಗಿ ಕನ್ನಡದ ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆಯಾಗುತ್ತದೆ. ಅಲ್ಲದೇ ಡಬ್ಬಿಂಗ್ ಗೆ ಅವಕಾಶವಿದ್ದರೂ ಸಹ ಮೂಲ ಭಾಷೆಯಲ್ಲಿಯೇ ರಿಲೀಸ್ ಮಾಡುತ್ತಿರುವುದರಿಂದ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

‘ತಮಿಳು, ತೆಲುಗು, ಮಲೆಯಾಳಂನಲ್ಲಿ ‘ದರ್ಬಾರ್’ ಇದ್ದರೂ ಕನ್ನಡದಲ್ಲಿ ಯಾಕಿಲ್ಲ..? ಈ ಚಿತ್ರವನ್ನು ಕನ್ನಡದಲ್ಲಿಯೇ ಡಬ್ ಮಾಡಿ ರಿಲೀಸ್ ಮಾಡಬೇಕಿತ್ತು. ಪ್ರಮುಖ ಚಿತ್ರಮಂದಿರಗಳಲ್ಲಿ ಈ ರೀತಿ ಸಿನಿಮಾ ರಿಲೀಸ್ ಆದರೆ ನಮ್ಮ ಚಿತ್ರಗಳಿಗೆ ಅನ್ಯಾಯ ಆಗುತ್ತದೆ’ ಎಂದು ಈ ಚಿತ್ರವು ರಿಲೀಸ್ ಮಾಡಬಾರದೆಂದು ಕರ್ನಾಟಕ ರಣಧೀರ ಪಡೆ ಸಂಘಟನೆ ಇಂದು ಕರ್ನಾಟಕ ಫೀಲ್ಮ್ ಛೇಂಬರ್ ನಲ್ಲಿ ಮನವಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos