ದುಬೆ ಹೋರಾಟ ವ್ಯರ್ಥ

ದುಬೆ ಹೋರಾಟ ವ್ಯರ್ಥ

ಕೇರಳ, ಡಿ. 09 : ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾಗೆ 8 ವಿಕೆಟ್ಗಳ ಭರ್ಜರಿ ಸೋಲನ್ನು ಕಂಡಿದೆ. ಟಾಸ್ ಗೆದ್ದು ಮೊದಲು ಪಿಲ್ಡಿಂಗ್ ಆಯ್ದುಕೊಂಡ ವಿಂಡೀಸ್, ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು. ಭಾರತವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ಗಳ ಕಲೆಹಾಕಿದರು.  ಭಾರತ ಪರ ಶಿವಂ ದುಬೆ 54 ರನ್ ಹಾಗೂ ರಿಷಭ್ ಪಂತ್ 33 ರನ್ ಕೆಲಹಾಕಿವ ಮೂಲಕ 170 ರನ್ ಕಲೆಹಾಕುವಲ್ಲಿ ಭಾರತವು ಸಶಕ್ತವಾಯಿತು. ವಿಂಡೀಸ್ ಪರ ವಿಲಿಯಮ್ಸ್ 2 ಹಾಗೂ ಹೇಡನ್ ವಾಲ್ಷ್ 2 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಶಕ್ತಿಯನ್ನು ಕಟ್ಟಿಹಾಕಿದರು.

170 ರನ್ ಗುರಿ ಬೆನ್ನತ್ತಿದ ವಿಂಡೀಸ್, 18.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿದರು. ಈ ಮೂಲಕ ಭಾರತವನ್ನು 8 ವಿಕೆಟ್ಗಳಿಂದ ವಿಂಡೀಸ್ ಬಗ್ಗುಬಡಿಯಿತು. ಭಾರತ-ವೆಸ್ಟ್ ಇಂಡೀಸ್ 3 ಪಂದ್ಯಗಳ ಟಿ-20 ಯಲ್ಲಿ ತಲಾ ಒಂದೊಂದು ಪಂದ್ಯವನ್ನು ಎರಡು ಟೀಮ್ಗಳು ಜಯಗಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos