ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಕ್ಯಾನ್ಸರ್ ಗ್ಯಾರಂಟಿ!

ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಕ್ಯಾನ್ಸರ್ ಗ್ಯಾರಂಟಿ!

ಬೆಂಗಳೂರು, ಸೆ. 20: ಪ್ರತಿನಿತ್ಯ ನಾವು ಬೆಳಗ್ಗೆ ಎದ್ದು 1 ಕಪ್ ಚಹಾ ಕುಡಿದರೆ ದಿನವಿಡೀ ಉಲ್ಲಾಸದಿಂದ ಇರಲು ಸಾಧ್ಯ ಎಂದು ನಂಬಿರುವವರು ಹಲವರು. ನೀರಿನ ನಂತರ ಅತಿ ಹೆಚ್ಚು ಜನ ಹೆಚ್ಚಾಗಿ ಸೇವನೆ ಮಾಡುವ ಪಾನೀಯ ಎಂದರೆ ಅದು ಚಹಾ. ಹೌದು, ಇದೆ ಚಹಾವನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಏನೆಲ್ಲಾ ಅರೋಗ್ಯ ಪರಿಣಾಮಗಳು ಉಂಟಾಗುತ್ತವೆ ನೋಡಿ.

ಅನ್ನನಾಳದ ಕ್ಯಾನ್ಸರ್ ಸಾಧ್ಯತೆ: ತುಂಬಾ ಬಿಸಿಯಾದ ಚಹಾ ಸೇವನೆ ಮಾಡಿದರೆ ಅದರಿಂದ ಅನ್ನನಾಳದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎಲುಬು ಸವೆಯುವ ಸಾಧ್ಯತೆ: ಹೆಚ್ಚು ಚಹಾ ಸೇವನೆ ಮಾಡುವ ಜನರಲ್ಲಿ ಎಲುಬು ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿದೆ. ಪ್ರೊಸ್ಟೇಟ್ ಕ್ಯಾನ್ಸರ್: ಹೆಚ್ಚು ಚಹಾ ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಯಾವ ಪುರುಷರು ಪ್ರತಿದಿನ ಹೆಚ್ಚು ಚಹಾ ಸೇವನೆ ಮಾಡುತ್ತಾರೋ ಅವರಲ್ಲಿ ಉಳಿದವರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ 50% ದಷ್ಟಿದೆ.

ಸೈಡ್ ಎಫೆಕ್ಟ್ ಬಹಳಷ್ಟಿದೆ: ನೀವು ಖಾಲಿ ಹೊಟ್ಟೆಗೆ ಹೆಚ್ಚು ಚಹಾ ಅಥವಾ ಕೆಫೆನ್ ಅಂಶ ಸೇವಿಸಿದರೆ ಇದರಿಂದ ನಿದ್ರಾ ಸಮಸ್ಯೆ, ಹೃದಯ ಬಡಿತ ಹೆಚ್ಚುವಿಕೆ, ಡಿಪ್ರೆಶನ್, ಖಿನ್ನತೆ, ಕೋಪ, ಪ್ಯಾನಿಕ್ ಅಟ್ಯಾಕ್ ಮತ್ತಿತರ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿದೆ.

 

ಫ್ರೆಶ್ ನ್ಯೂಸ್

Latest Posts

Featured Videos