ಆರೋಗ್ಯ ಸಚಿವರು ‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಚಾಲನೆ

ಆರೋಗ್ಯ ಸಚಿವರು ‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಚಾಲನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯ ಸ್ತಂಭನ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲು ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ.

ದಿ. ‘ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ.ಇಂದು ಧಾರವಾಡದ ಎಸ್‌ಡಿಎಂ ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಲಿದ್ದಾರೆ.

ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಘನ ಉಪಸ್ಥಿತಿ ಇರಲಿದೆ. ಅಭಿಮಾನಿಗಳ ಅಚ್ಚುಮೆಚ್ಚಿನ ಕರ್ನಾಟಕ ರತ್ನ ದಿ.ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಈ ಕುರಿತು ಪ್ರಕರಣಗಳು ಹೆಚ್ಚು ವರದಿ ಆಗುವುದು ಮುನ್ನೆಲೆ ಬಂತು.ಶೇ. 35ರಷ್ಟು ಹರೆಯದವರಲ್ಲಿ ಈ ಸಮಸ್ಯೆಅಧ್ಯಯನದ ಪ್ರಕಾರ ಹೃದಯ ಸ್ತಂಭನಕ್ಕೆ ಒಳಗದವರಲ್ಲಿ ಶೇ.35ರಷ್ಟು ಮಂದಿ 40 ವಯಸ್ಸಿನ ಆಸುಪಾಸಿನ ಹದಿಹರೆಯದವರೇ ಆಗಿದ್ದಾರೆ.

ಹೃದಯ ಸ್ತಂಭನದಂತಹ ಪ್ರಕರಣಗಳಲ್ಲಿ ಒಂದು ಗಂಟೆ ಗೋಲ್ಡ್‌ ಹವರ್ ಮುಖ್ಯವಾಗಿರುತ್ತದೆ. ಇದೇ ಅವಧಿಯಲ್ಲಿ ಸಾಧ್ಯವಾದಷ್ಟು ಚಿಕಿತ್ಸೆ ಕೊಟ್ಟು ವ್ಯಕ್ತಿಯ ಜೀವ ಉಳಿಸಬೇಕಿರುತ್ತದೆ. ಈ ಕಾರಣದಿಂದಲೇ ಸರ್ಕಾರ ಈ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ.

ರಾಜ್ಯ ಸರ್ಕಾರವು ಅಪಾರ ಸಾಮಾಜಿಕ ಸೇವೆಗೈದ, ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿಯೇ ಹೃದಯಾಘಾತ ಚಿಕಿತ್ಸೆಗಾಗಿ ಆಸ್ಪತ್ರೆಯಗಳಲ್ಲಿ ‘ಎಇಡಿ’ ವ್ಯವಸ್ಥೆ ಅಳವಡಿಕೆ ಯೋಜನೆ ಜಾರಿ ತರಲು ಮುಂದಾಯಿತು.ಹೃದಯಾಘಾತಕ್ಕೆ ಒಳಗಾದ ಕೂಡಲೇ ಅಂತವರಿಗೆ ಕೂಡಲೇ ಚಿಕಿತ್ಸೆ ಕೊಡಲು ನೆರವಾಗುವಂತಹ ಸ್ವಯಂ ಚಾಲಿತ ಡಿಫಿಬ್ರಿಲೇಟರ್ (AED) ಸಾಧನೆಗಳ ಮೂಲಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಸರ್ಕಾರ ಪರಿಚಯಿಸುತ್ತಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos