ಸಿಲಿಕಾನ್ ಸಿಟಿಗೆ ಬರಲಿದೆ ಡಬಲ್ ಡೆಕ್ಕರ್ ಮೆಟ್ರೋ

ಸಿಲಿಕಾನ್ ಸಿಟಿಗೆ ಬರಲಿದೆ ಡಬಲ್ ಡೆಕ್ಕರ್ ಮೆಟ್ರೋ

ಬೆಂಗಳೂರು, ಸೆ. 13: ಬೆಂಗಳುರು ನಗರದಲ್ಲಿ ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕರ್ ಆಗಿ ಸಂಚಾರ ಸೇವೆಯನ್ನು ನೀಡಲಿವೆ. ಇದರಿಂದ ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ ಸೇರಲಿದೆ.

ಜಯದೇವ ಆಸ್ಪತ್ರೆ ಮುಂಭಾಗ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಲಘು ವಾಹನ, ಕಾರು ಬೈಕುಗಳು ಸಂಚರಿಸುವ ಡಬಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ರೋಡ್ ಲೈನ್ ನಿರ್ಮಿಸಲಾಗಿದೆ.

ಅದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಮೂರು ಕಿಲೋಮೀಟರ್ ಡಬಲ್ ಡೆಕ್ಕರ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಜಯದೇವ ಆಸ್ಪತ್ರೆ ಮುಂಭಾಗ ಕಾಮಗಾರಿ ಭರದಿಂದ ಸಾಗಿದೆ. ಫ್ಲೈಓವರ್ ಒಡೆದು ಇದೇ ಮಾರ್ಗದಲ್ಲಿ ನೆಲ ಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕು ಸೇರಿ ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ನಿಗದಿತ ಅಂತರದಲ್ಲಿ ಮತ್ತೊಂದು ಪಿಲ್ಲರ್ ಅಳವಡಿಸಿ ಮೆಟ್ರೋ ಲೈನ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಟ್ರ್ಯಾಕ್ ನಿರ್ಮಾಣ ಮಾಡಲಿದ್ದು ಒಂದೇ ಖರ್ಚಿನಲ್ಲಿ 2 ಮಾರ್ಗ ನಿರ್ಮಾಣವಾಗಲಿವೆ ಎಂದು ತಿಳಿದು ಬಂದಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos