ದೋಸ್ತಿಗಳ  ಹೊಸ ತಂತ್ರ!

ದೋಸ್ತಿಗಳ  ಹೊಸ ತಂತ್ರ!

ಬೆಂಗಳೂರು, ಆ. 6: 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕಾರಣಳಿಂದ ನಾನಾ ರೀತಿಯ ಬದಲಾವಣೆಗಳು ಆಗಿವೆ. ಬಹು ದೊಡ್ಡ ಬದಲಾವಣೆ ಎಂದರೆ ದೊಸ್ತಿ ಸರ್ಕಾರ ಪತನವಾಗಿದ್ದು. ಇದಕ್ಕೆ ಬಹು ಮುಖ್ಯವಾದ ಕಾರಣ ಎಂದರೆ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು. ಸದ್ಯ ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿದೆ. ಹಲವು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಮುರಿದುಬಿದ್ದಿತ್ತು.

ರಾಜೀನಾಮೆ ನೀಡಿದ ಅತೃಪ್ತ ಶಾಸಕರುಗಳನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದು, ಇದರ ವಿರುದ್ಧ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ರಾಜೀನಾಮೆ ನೀಡಿ ಸರ್ಕಾರ ಪತನವಾಗಲೂ ಕಾರಣಕರ್ತರಾದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರು, ಈಗಾಗಲೇ ಆ ಕ್ಷೇತ್ರಗಳಿಗೆ ಪರ್ಯಾಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಾರಂಭ ಮಾಡಿ ಬಿಟ್ಟಿದ್ದಾರೆ. ಅಷ್ಟೆ ಅಲ್ಲದೆ ಇದರ ಜೊತೆಗೆ ಮತದಾರರ ಮುಂದೆ ಅನರ್ಹ ಶಾಸಕರನ್ನು ಮುಖ ಭಂಗ ಮಾಡುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಿರ್ಮಾನ ಮಾಡಿದ್ದು ಉಪ ಚುನಾವಣೆಯ ಪ್ರಚಾರವನ್ನು ಉಭಯತಂಡಗಳು ಪ್ರಾರಂಭ ಮಾಡಿಕೊಂಡಿವೆ.

 

ಫ್ರೆಶ್ ನ್ಯೂಸ್

Latest Posts

Featured Videos