ಡಿಕೆಶಿ ಎಂಟ್ರಿ ಆಗ್ತಾರಾ?

ಡಿಕೆಶಿ ಎಂಟ್ರಿ ಆಗ್ತಾರಾ?

ಬೆಳಗಾವಿ , ನ. 28 : ಉಪಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ಗುರು ಡಿಕೆ ಶಿವಕುಮಾರ್ ಅವರು ಗೋಕಾಕ್ ಅಖಾಡಕ್ಕೆ ಯಾಕೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೋ ಕಮೆಂಟ್ಸ್ ಎಂದು ಜಾರಿಕೊಂಡಿದ್ದಾರೆ.
ಸುದ್ದಿಗಾರರೊದಿಗೆ ಮಾತನಾಡಿ, ಈಗ ಚುನಾವಣೆ ಸಮಯ ಹೀಗಾಗಿ ನಾನು ಮಾತನಾಡಲು ಇಷ್ಟಪಡಲ್ಲ ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಶಿಸ್ತಿನ ಸಿಪಾಯಿಗಳ ನೀವು ಗೋಕಾಕ್ ಬಿಟ್ಟು ಅಥಣಿಯಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ, ನನಗೆ ಪಕ್ಷ ಇಲ್ಲಿ ಪ್ರಚಾರ ನಡೆಸಲು ಜವಾಬ್ದಾರಿ ನೀಡಿದೆ. ಹೀಗಾಗಿ ಅಥಣಿಗೆ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos