ಕಾಂಗ್ರೆಸ್ ನಲ್ಲಿ ಗುಂಪು ರಾಜಕಾರಣ ಇಲ್ಲ: ಡಿ.ಕೆ ಶಿವಕುಮಾರ್

ಕಾಂಗ್ರೆಸ್ ನಲ್ಲಿ ಗುಂಪು ರಾಜಕಾರಣ ಇಲ್ಲ: ಡಿ.ಕೆ ಶಿವಕುಮಾರ್

ಬೆಂಗಳೂರು: ಈ ಬಾರಿ ಲೋಕಸಭೆ ಚುಣಾವಣೆಯ ಬಿಸಿ ಹೆಚ್ಚಾಗಿದು, ರಾಜ್ಯ ಸರ್ಕಾರ ಈ ಬಾರಿ ಹೊಸ ಮುಖಗಳಿಗೆ ಮಣೆಯಾಕಿದ್ದಾರೆ. ಅದರೆ ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಹಾಗೂ ಹೈಕಮಾಂಡ್‌ ನಾಯಕರಿಗೆ ತಲೆನೋವಾಗಿದ್ದು. ಇಂದು ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ಕೋಲಾರ ಕ್ಷೇತ್ರದ ಹಲವಾರು ನಾಯಕರಲ್ಲಿ ಅಸಮದಾನ ಉಂಟಾಗಿದೆ.

ಕೋಲಾರ ಕ್ಷೇತ್ರದ ಟಿಕೆಟ್ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಲ್ಲಿ ಯಾವುದೇ ಗುಂಪು ರಾಜಕಾರಣ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಯಾರೇ ಆದರೂ ಲಕ್ಷ್ಮಣ ರೇಖೆ ದಾಟುವ ಹಾಗಿಲ್ಲ.  ಸೀಟು ಗೆಲ್ಲೋದು ಬಿಡೋದು ನಂತರ,  ಶಿಸ್ತು ಮುಖ್ಯ.  ಅಂತಿಮವಾಗಿ ಯಾರೇ ಶಿಸ್ತು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಶಿಸ್ತು ಉಲ್ಲಂಘಿಸಿದವರು ಕ್ಷಮೆ ಕೇಳಿದ್ದಾರೆ ಎಂದರು.

ಮುನಿಯಪ್ಪ ರಮೇಶ್ ಜೊತೆ ಮಾತನಾಡಿದ್ದೇನೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪು ರಾಜಕಾರಣ ಇಲ್ಲ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos