ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದೆ

ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಕೇವಲ ಎರಡು ದಿನ ಬಾಕಿ ಇದ್ದು ಕೋಲಾರ ಕ್ಷೇತ್ರ ಟಿಕೆಟ್ ಮೀಸಲು ವಿಚಾರ ಕಾಂಗ್ರೆಸ್ ಪಾಲಿಗೆ ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ.

ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಹಳ ದಿನಗಳಿಂದ ದೆಹಲಿಯಲ್ಲಿ ಈ ಹಗ್ಗ ಜಗ್ಗಾಟ ನಡೆದಿದ್ದು ಇದೀಗ ಕ್ಲೈಮಾಕ್ಸ್ ಹಂತ ತಲುಪಿದ್ದು , ಕೋಲಾರ ಭಾಗದ ಶಾಸಕರು ಮತ್ತು ಸಚಿವರ  ನಡೆ ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ಮತ್ತು ಸಚಿವ ಮುನಿಯಪ್ಪನವರ ಬಣದ ನಡುವೆ ತೀವ್ರ ತಿಕ್ಕಾಟ ಏರ್ಪಟ್ಟಿದೆ.

ಒಂದುವೇಳೆ ಕೆ.ಹೆಚ್. ಮುನಿಯಪ್ಪ ಕೇಳಿರುವಂತೆ ಅವರ ಅಳಿಯನಿಗೆ ಟಿಕೆಟ್ ನೀಡೋದಾದ್ರೆ ತಾವು ರಾಜೀನಾಮೆ ನೀಡೋದಾಗಿ ಸಚಿವ ಎಂ.ಸಿ.ಸುಧಾಕರ್ ಈಗಾಗಲೇ ನಾಯಕರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಭಾಗದ ೫ ಶಾಸಕರು ಕೂಡ ರಾಜೀನಾಮೆ ನೀಡಲಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ಗೆ ಸಂದೇಶ ರವಾನಿಸಿದ್ದಾರೆ. ಕೋಲಾರ ಬಣ ಬಡಿದಾಟ ತಡೆಯುವಲ್ಲಿ ಸ್ವತಃ ಸಿಎಂ ಮತ್ತು ಡಿಸಿಎಂ ಕೂಡ ವಿಫಲರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos