ವಿಲೇವಾರಿ ಘಟಕಗಳ ಸ್ಥಾಪನೆ

ವಿಲೇವಾರಿ ಘಟಕಗಳ ಸ್ಥಾಪನೆ

ಬೆಂಗಳೂರು, ನ. 16 : ಈಸ್ಟ್ ಡೆಲ್ಲಿ ಮುನ್ಸಿಪಲ್ ಕಾಪೆರ್ರೇಷನ್ ಮಾದರಿಯಲ್ಲೇ ಬಿಬಿಎಂಪಿಯಲ್ಲೂ ವೇಸ್ಟ್ ಎನರ್ಜಿ ಪ್ಲಾಂಟ್ ಹಾಗೂ ಕಟ್ಟಡ ಮತ್ತು ಅವಶೇಷಗಳ ಘಟಕ ಸ್ಥಾಪಿಸಲಾಗುವುದು ಎಂದು ಮೇಯರ್ ಗೌತಮ್ಕುಮಾರ್ ತಿಳಿಸಿದರು.
ಆಡಳಿತ ಮತ್ತು ವಿಪಕ್ಷ ನಾಯಕರೊಂದಿಗೆ ದೆಹಲಿ ಕಾಪೆರ್ರೇಷನ್ಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ ನಂತರ ಮೇಯರ್ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಹಾಗೂ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಈಸ್ಟ್ ಡೆಲ್ಲಿ ಮುನ್ಸಿಪಲ್ ಕಾಪೆರ್ರೇಷನ್ ಉತ್ತಮವಾದ ಕ್ರಮಗಳನ್ನು ಕೈಗೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos