ಡಿಫರೆಂಟ್ ‘ನಾನು’ ಮತ್ತೆ ಬರ್ತಿದ್ದಾನೆ..!

ಡಿಫರೆಂಟ್ ‘ನಾನು’ ಮತ್ತೆ ಬರ್ತಿದ್ದಾನೆ..!

ಬೆಂಗಳೂರು, ಸೆ. 24 : ಉಪೇಂದ್ರ ನಿಭಾಯಿಸಿದ್ದ ‘ನಾನು’ ಎಂಬ ಪಾತ್ರ ಸಿಕ್ಕಾಪಟ್ಟೆ ಡಿಫರೆಂಟ್. 1999ರಲ್ಲಿ ತೆರೆಕಂಡ ಚಿತ್ರದಲ್ಲಿ ನಾಯಕಿಯರಾಗಿ ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಟಿಸಿದ್ದರು. ಉಪೇಂದ್ರ ಚಿತ್ರಕ್ಕಾಗಿ ಗುರುಕಿರಣ್ ಸಂಗೀತ ಸಂಯೋಜಿಸಿದ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್. ಈಗ ಮತ್ತೆ 20 ವರ್ಷಗಳ ಬಳಿಕ ಉಪೇಂದ್ರ ಸಿನಿಮಾ ಮತ್ತೆ ರಿ ರಿಲೀಸ್ ಆಗುತ್ತಿದೆ.
20 ವರ್ಷಗಳ ಹಿಂದೆ ಮಲ್ಟಿಪ್ಲೆಕ್ಸ್ಗಳು ಇರಲಿಲ್ಲ. ಈಗ ಸಿನಿಮಾ ಪರದೆಗಳ ಸಂಖ್ಯೆ ಹೆಚ್ಚಿರುವುದರಿಂದ ಇಂಥ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos