ಹೈನುಗಾರಿಕೆಯಿಂದ ಅಭಿವೃದ್ಧಿ ಸಾದ್ಯ

ಹೈನುಗಾರಿಕೆಯಿಂದ ಅಭಿವೃದ್ಧಿ ಸಾದ್ಯ

ಪಿರಿಯಾಪಟ್ಟಣ: ಗ್ರಾಮೀಣ ಭಾಗದ ರೈತರು ಹೈನುಗಾರಿಕೆಯನ್ನು ಹೆಚ್ಚಿಗೆ ಅಳವಡಿಸಿಕೊಂಡಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯಾಗಲಿವೆ ಎಂದು ವಿಸ್ತರಣಾಧಿಕಾರಿ ತುಳಸಿಕುಮಾರ್ ತಿಳಿಸಿದರು.
ತಾಲೂಕಿನ ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯–೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು,
ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ, ಹೈನುಗಾರಿಕೆ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭಾಂಶದ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಬಹುದು, ಸಹಕಾರ ಸಂಘಗಳು ಸಹಕಾರ ತತ್ವದ ಆಧಾರದಡಿ ಕೆಲಸ ನಿರ್ವಹಿಸುತ್ತಿದ್ದು ಸದಸ್ಯರ ಪರಸ್ಪರ ಸಹಕಾರದಿಂದ ಸಂಘವನ್ನು ಉನ್ನತ ಮಟ್ಟಕ್ಕೆ ತರಲು ಸಾಧ್ಯ, ಆಡಳಿತ ಮಂಡಲಿ ಹಾಗೂ ನೌಕರರು ಗುಣಮಟ್ಟಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದರು.
ಅತ್ಯಂತ ಹೆಚ್ಚು ಈ ಭಾಗದ ರೈತರು ಗುಣಮಟ್ಟದ ಹಾಲು ಪೂರೈಸುತ್ತಿರುವ ಫಲವಾಗಿ ಸ್ಥಳೀಯವಾಗಿ ಹಾಲು ಮಾರಾಟ ಹೆಚ್ಚಾಗಿ ಪಿರಿಯಾಪಟ್ಟಣ ತಾಲೂಕು ಗುಣಮಟ್ಟದ ಹಾಲಿನ ಉತ್ಪಾಧನೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ, ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಾಗೂ ಒಕ್ಕೂಟದಿಂದ ಅನೇಕ ಸವಲತ್ತುಗಳನ್ನು ನೀಡಲಾಗಿದೆ, ರಾಸುಗಳಿಗೆ ವಿಮೆ ಮಾಡಿಸಲು ಒಕ್ಕೂಟದಿಂದ ಶೇ.೫೦ ಅನುಧಾನ ನೀಡುತ್ತಿದೆ ಎಂದರು
ಸಂಘದ ಅಧ್ಯಕ್ಷ , ಎಸ್ ಡಿ ಇಂದ್ರೇಶ್ ಉಪಾಧ್ಯಕ್ಷ ಎಸ್ ಆರ್ ಮಂಜುನಾಥ್ ನಿರ್ದೇಶಕರುಗಳಾದ. ಡಿ ಮಂಜುನಾಥ್ ದೊಡ್ಡಪ್ಪ ನಿಂಗಪ್ಪ ನಾಗಪ್ಪ ಅಶೋಕ್ ಕುಮಾರ್ ನಾಗರಾಜಪ್ಪ ರಾಜಶೇಖರ್ ಮೋಟಯ್ಯ ಸುನಂದ ಮಂಗಳ ಸಿಇಒ ನಾಗೇಶ್ ಹಾಲು ಪರಿವೀಕ್ಷಕ ವೆಂಕಟೇಶ್ ಸಹಾಯಕ ಲಿಂಗರಾಜು ಮತ್ತು ಗ್ರಾಮಸ್ಥರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos