ರಸಗೊಬ್ಬರ ದಿಂದ ಭೂಮಿ ಫಲವತ್ತತೆ ಹಾಳು

ರಸಗೊಬ್ಬರ ದಿಂದ ಭೂಮಿ ಫಲವತ್ತತೆ ಹಾಳು

ಕೋಲಾರ:ರೈತರು ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ ಜತೆಗೆ ಉತ್ಪಾದನಾ ಖರ್ಚು ಅಧಿಕವಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಗಾಯಿತ್ರಿ ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರವು ತಾಲ್ಲೂಕಿನ ಬ್ರಾಹ್ಮಣರದಿನ್ನೆ ಗ್ರಾಮದಲ್ಲಿ ಎಲೆಕೋಸಿನಲ್ಲಿ ಸಮಗ್ರ ಪೋಷಕಾಂಶಗಳು ಹಾಗೂ ಕೀಟ ನಿರ್ವಹಣೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಸಾವರಿ ಪದ್ಧತಿಯು ಶೇ ೮೦-೯೦ರಷ್ಟು ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಶೇ ೨೦-೪೦ರಷ್ಟು ರಸಗೊಬ್ಬರ ಉಳಿತಾಯ ಮಾಡಬಹುದು. ರಸಗೊಬ್ಬರಗಳಿಂದ ಗಿಡಗಳ ಬೇರಿಗೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ರೈತರು ತಮಗೆ ತೋಚಿದಂತೆ ರಸಗೊಬ್ಬರಗಳನ್ನು ಬಳಸಬಾರದು. ಮಣ್ಣಿನ ಪರೀಕ್ಷೆ ಮಾಡಿಸಿ ಬೆಳೆಗೆ ಅವಶ್ಯಕವಾದಷ್ಟು ರಸಗೊಬ್ಬರಗಳನ್ನು ಮಾತ್ರ ಉಪಯೋಗಿಸಬೇಕು. ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳ ಸಲಹೆ ಸೂಚನೆಯಂತೆ ರಸಗೊಬ್ಬರ ಬಳಸಬೇಕು. ರಸಗೊಬ್ಬರ ಕಡಿಮೆ ಮಾಡುವುದರಿಂದ ಖರ್ಚು ಕಡಿಮೆಯಾಗಿ ಅಧಿಕ ಲಾಭ ಪಡೆಯಬಹುದು ಎಂದು ಸೂಚಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos